ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ

ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ

( ರಾಗ ಭೈರವಿ ಅಟತಾಳ) ಶ್ರೀನಿವಾಸನು ಬಂದ ಕೋನೇರಿ ತಿಮ್ಮಪ್ಪ ವಾಣಿಯರಸನಯ್ಯನು ||ಪ|| ವೇಣುಗಾನಲೋಲ ಮೋಸಮಾಡಲು ಬಂದ ದೀನರಕ್ಷಕನಯ್ಯ ಮೋಹನಕೃಷ್ಣ || ಪತಿತಪಾವನ ಬಂದ ಸಚ್ಚಿದಾನಂದನು ಹಿತಕರನು ಬಂದ ನಿಖಿಳವೇದ ಪ್ರತಿಪಾದ್ಯನು ಬಂದ ಹಿಗ್ಗುತಲಿ ನಿಂದ ಮತಿಗೆಡಿಸಿ ಪೋದನಯ್ಯ ಮುದ್ದುರಂಗಯ್ಯ ಕೃಷ್ಣ || ಉಡುಪಿನಿಲಯ ಬಂದ ಉಡುಪನಂತ್ಹೊಳೆಯುತ ತಟಿಯಂತೆ ಮರೆಯಾದ ಕಾಣಬಾರದ ವಸ್ತು ಉಟ್ಟದ್ದು ತೊಟ್ಟದ್ದು ಇಟ್ಟದ್ದು ನೋಡಲು ಅಷ್ಟು ಮಾಯವಯ್ಯ ಬಲು ಮಾಯವಯ್ಯ || ಏಸು ಹರುಷವೊ ಏಸು ಕರುಣವೊ ಕಾಸು ಬಾಳದ ಎನಮ್ಯಾಲ ಮುದ್ದು ಕೃಷ್ಣಯ್ಯಗೆ ವಾಸುಕಿ ಶಯನನು ತಂದೆ ಪುರಂದರವಿಠಲ ಶೇಷಾದ್ರಿವಾಸನಯ್ಯ ಕೇಳಣ್ಣಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು