ಶ್ರೀನಿಕೇತನ ಪಾಲಯ ಮಾಂ

ಶ್ರೀನಿಕೇತನ ಪಾಲಯ ಮಾಂ

( ರಾಗ - ಅರಭಿ(ದೇವಗಾಂಧಾರ) ಆದಿತಾಳ (ತೀನ್ ತಾಲ್) ) ಶ್ರೀನಿಕೇತನ ಪಾಲಯ ಮಾಂ , ಶ್ರೀನಿಕೇತನ ||ಪ|| ಜ್ಞಾನಗಮ್ಯ ಕರುಣಾನಿಧಿ ನಿನ್ನಡಿ- ಗಾನು ನಮಿಸುವೆ ಪೊರೆ ದೀನದಯಾಳೋ ||ಅ.ಪ|| ಜ್ಞಾನಮಾನದಾ ಶರಣರ ಸುರ- ಧೇನು ಸರ್ವದಾ ನೀನೆಂದರಿತು ಸದಾನುರಾಗದಲಿ ಧ್ಯಾನಿಪೆ ಮನದನುಮಾನವ ಕಳೆಯೋ ||೧|| ಶ್ರೀಕರಾರ್ಚಿತ ಪಾದಾಬ್ಜ ಪ- ರಾಕು ಅಚ್ಯುತ ಶೋಕನಾಶನ ವಿಶೋಕಜನಕ ಹೃ- ದ್ವ್ಯಾಕುಲ ಕಳೆಯೊ ಕೃಪಾಕರ ಒಲಿದು ||೨|| ಪನ್ನಗಾಚಲನಿವಾಸ ಪ್ರ- ಪನ್ನ ವತ್ಸಲ ಬಿನ್ನಪ ಕೇಳೊ ಜಗನ್ನಾಥವಿಠ್ಠಲ ಧನ್ಯನ ಮಾಡೊ ಶರಣ್ಯ ಶರಣನಾ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು