ಶೋಭನವೇ ಇದು ಶೋಭನವೇ

ಶೋಭನವೇ ಇದು ಶೋಭನವೇ

( ರಾಗ ಸೌರಾಷ್ಟ್ರ. ಆದಿ ತಾಳ) ಶೋಭನವೇ ಇದು ಶೋಭನವೇ ||ಪ|| ವೈಭವವೇ ನಮ್ಮ ವಾಮನಮೂರ್ತಿಗೆ || ಪಾಲುಗಡಲು ಮನೆಯಾಗಿರಲು ಆಲದೆಲೆಯ ಮೇಲೆ ಮಲಗುವರೆ ಮೂರ್ಲೋಕವ ನಿನ್ನುದರದೊಳಿಂಬಿಟ್ಟು ಮುದ್ದು- ಬಾಲಕನಾಗಿ ಎತ್ತಿಸಿಕೊಂಬರೆ || ಸಿರಿ ನಿನ್ನ ಕೈವಶವಾಗಿರಲು ತಿರಿವರೆ ಬಲಿಯ ದಾನವ ಬೇಡಿ ಸರಸಿಜಭವ ನಿನ್ನ ಪೂಜೆ ಮಾಡುತಲಿರೆ ನರನ ಬಂಡಿಯ ಬೋವನಾಗುವರೆ || ಕಮ್ಮಗೋಲನ ಪಿತನಾಗಿರಲು ಸುಮ್ಮನೆ ಕುಬುಜೆಗೆ ಸೋಲುವರೆ ಬೊಮ್ಮ ಮೂರುತಿ ನಿನಗೆಣೆಯುಂಟೆ ತ್ರಿಜಗದಿ ಹಮ್ಮಿನ ದೇವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು