ಶರಣೆಂಬೆ ವಾಣಿ

ಶರಣೆಂಬೆ ವಾಣಿ

ಶರಣೆಂಬೆ ವಾಣಿ ಪೊರೆಯೆ ಕಲ್ಯಾಣಿ ||ಪಲ್ಲವಿ|| ವಾಗಭಿಮಾನಿ ವರ ಬ್ರಹ್ಮಾಣಿ ಸುಂದರವೇಣಿ ಸುಚರಿತ್ರಾಣಿ ||ಅನುಪಲ್ಲವಿ|| ಜಗದೊಳು ನಿಮ್ಮ ಪೊಗಳುವೆನಮ್ಮ ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||೧|| ಪಾಡುವೆ ಶ್ರುತಿಯ ಬೇಡುವೆ ಮತಿಯ ಪುರಂದರವಿಠಲನ ಸೋದರಸೊಸೆಯ ||೨|| (ಪುರಂದರವಿಠಲನ ಮುದ್ದಿನ ಸೊಸೆಯ ಅನ್ನುವ ಪಾಠಾಂತರವೂ ಇರುವುದೆಂದು ತೋರುತ್ತೆ)
ದಾಸ ಸಾಹಿತ್ಯ ಪ್ರಕಾರ
ಬರೆದವರು