ಶರಣು ಸಿದ್ಧಿ ವಿನಾಯಕ

ಶರಣು ಸಿದ್ಧಿ ವಿನಾಯಕ

(ರಾಗ ಸೌರಾಷ್ಟ್ರ ತ್ರಿಪುಟ ತಾಳ) ಶರಣು ಸಿದ್ಧಿ ವಿನಾಯಕ ಶರಣು ವಿದ್ಯಾ ಪ್ರದಾಯಕ ಶರಣು ಪಾರ್ವತಿ ತನಯ ಮೂರುತಿ ಶರಣು ಮೂಷಿಕ ವಾಹನ ನಿಟಿಲ ನೇತ್ರನ ದೇವಿಸುತನೆ ನಾಗಭೂಷಣ ಪ್ರೀಯನೆ ತಟಿಲತಾಂಕಿತ ಕೋಮಲಾಂಗನೆ ಕರ್ಣ ಕುಂಡಲಧಾರನೆ ಬಟ್ಟ ಮುತ್ತಿನ ಪದಕ ಹಾರನೆ ಬಾಹುಹಸ್ತಚತುಷ್ಟನೆ ಇಟ್ಟ ತೊಡುಗೆಯ ಹೇಮ ಕಂಕಣ ಪಾಶ ಅಂಕುಷಧಾರನೆ ಕುಕ್ಷಿ ಮಹಲಂಬೋದರನೆ ಇಕ್ಷುಚಾಪನ ಗೆಲಿದನೆ ಪಕ್ಷಿ ವಾಹನ ಸಿರಿ ಪುರಂದರ ವಿಠಲನ ನಿಜ ದಾಸನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು