ಶರಣು ಶರಣು (೨) (ವಿನಾಯಕ ಸ್ತೋತ್ರ)

ಶರಣು ಶರಣು (೨) (ವಿನಾಯಕ ಸ್ತೋತ್ರ)

( ರಾಗ ಸೌರಾಷ್ಟ್ರ ಚಾಪುತಾಳ) ಶರಣು ಶರಣು ||ಪ|| ಶರಣು ಬೆನಕನೆ ಕನಕರೂಪನೆ ಕಾಮಿನಿಸಂಗದೂರನೇ || ಶರಣು ಸಾಂಬನ ಪ್ರೀತಿಪುತ್ರನೆ ಶರಣುಜನರಿಗೆ ಮಿತ್ರನೆ ||ಅ|| ಏಕದಂತನೆ ಲೋಕಖ್ಯಾತನೆ ಏಕವಾಕ್ಯಪ್ರವೀಣನೇ ಏಕವಿಂಶತಿ ಪತ್ರಪೂಜಿತನೇಕ ವಿಘ್ನವಿನಾಯಕ || ಲಂಬಕರ್ಣನೆ ನಾಸಿಕಾಧರನೆ ಗಾಂಭೀರ್ಯ ಇವಗುಣಸಾರನೇ ಕಂಬುಕಂಧರ ಇಂದುಮೌಳಿಜ ಚಂದನಚರ್ಚಿತಾಂಗನೇ || ಚತುರ್ಬಾಹು ಚರಣ ತೊಡಲನೆ ಚತುರ ಆಯುಧಧಾರನೇ ಮತಿಯವಂತನೆ ಮಲಿನಜನಿತನೆ ಅತಿಯ ಮಧುರಾಹಾರನೇ || ವಕ್ರತುಂಡನೆ ಮಹಾಕಾಯನೆ ಅರ್ಕಕೋಟಿಪ್ರದೀಪನೇ ಚಕ್ರಧರ ಹರಬ್ರಹ್ಮಪೂಜಿತ ರಕ್ತವಸ್ತ್ರಾಧಾರನೇ || ಮೂಷಿಕಾಸನ ಶೇಷಭೂಷಣ ಅಶೇಷ ವಿಘ್ನವಿನಾಯಕ ದಾಸ ಪುರಂದರವಿಟ್ಠಲೇಶನ ಈಶಗುಣಗಳ ಪೊಗಳುವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು