Skip to main content

ಶರಣು ವೆಂಕಟರಮಣ

( ರಾಗ ಸುರಟಿ. ಆದಿ ತಾಳ)

ಶರಣು ವೆಂಕಟರಮಣ, ನಿನ್ನ
ಚರಣವ ನಂಬಿದೆ ನಾನು ||ಪ||
ಕರುಣಾಸಾಗರ ಕಾಮಿತಫಲವೀವ
ಶರಣಭಕ್ತರ ಕಾವ ಗರುಡವಾಹನ ದೇವ ||ಅ||

ಭಕ್ತವತ್ಸಲ ಹರಿಯೆ, ನಮ್ಮ
ಭವದುರಿತಪರಿಹರನೆ
ಅಖಿಲಾಂಡಕೋಟಿ ಬ್ರಹ್ಮಾಂಡನಾಯಕ
ಶರಣೋ ಭಕ್ತರ ಕಾವ ಸುರಮುನಿಗಳ ದೇವ ||

ಪಾಪವಿನಾಶಿನಿ ತೀರ್ಥ, ನಮ್ಮ
ಪಾತಕವ ಪರಿಹರನೆ
ಶ್ರೀವೆಂಕಟಗಿರಿ ಶ್ರೀವಾಸ
ಕೋನೆರಿತೀರ್ಥಧಿವಾಸ ನಿವಾಸ ||

ದೇಶಕಧಿಕವಾದ, ನಮ್ಮ
ಶೇಷಗಿರಿಯಲಿ ವಾಸ
ಶ್ರೀವೆಂಕಟಗಿರಿ ತಿರುಮಲೇಶ
ದಾಸದಾಸರ ಸಲಹುವ ಪುರಂದರವಿಠಲ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: