ಶರಣು ಭಾರತಿ ದೇವಿಗೆ

ಶರಣು ಭಾರತಿ ದೇವಿಗೆ

(ರಾಗ ನಾಟ ತ್ರಿಪುಟ ತಾಳ) ಶರಣು ಭಾರತಿದೇವಿಗೆ ಶರಣು ವಾಯುರಮಣಿಗೆ ||ಪ|| ಶರಣು ಶರಣರ ಪೊರೆವ ಕರುಣಿಗೆ ಶರಣು ಸುರವರ ದೇವಿಗೆ ||ಅ.ಪ|| ಸುರರು ಮೊದಲಾದವರಿಗೆಲ್ಲ ಪರಮ ಮಂಗಳವೀವಳೆ ಚರಣಕಮಲಕೆ ಮೊರೆಯ ಹೊಕ್ಕೆನು ಕರುಣಿಸೆನಗೆ ಸುಮಂಗಳ ಪಿಂಗಳರೂಪಳೆ ಮಂಗಳಮಹಿಮಳೆ ಹಿಂಗದೆ ಕೊಡು ಹರಿಭಕುತಿಯ ರಂಗನಾ ಪದಾಬ್ಜ ಭೃಂಗಳೆ ಸಂಗೀತಕ್ಕೆ ಬಹುಪ್ರಿಯಳೆ ಪಕ್ಷಿವಾಹನ ಲಕ್ಷ್ಮಿರಮಣನ ದಕ್ಷ ಪುರಂದರವಿಠಲನ ಅಕ್ಷಯದಿಂದಲಿ ಭಜಿಸುವಲೆ ರಕ್ಷಿಸೆನ್ನನು ಅನುದಿನ
ದಾಸ ಸಾಹಿತ್ಯ ಪ್ರಕಾರ
ಬರೆದವರು