ಶರಣು ನಿನಗೆ ಶರಣಂಬೆನು ವಿಠಲ

ಶರಣು ನಿನಗೆ ಶರಣಂಬೆನು ವಿಠಲ

(ರಾಗ ಮಧ್ಯಮಾವತಿ ಅಟ ತಾಳ) ಶರಣು ನಿನಗೆ ಶರಣಂಬೆನು ವಿಠಲ ಕರುಣವಾರಿಧಿ ಎನ ಕಾಯೋ ವಿಠಲ ದಶರಥರಾಯನ ಉದರದಿ ವಿಠಲ ಶಿಶುವಾಗಿ ಉದಿಸಿದ್ಯೋ ಶ್ರೀರಾಮವಿಠಲ ಶಶಿಮುಖಿ ಗೋಪಿಯ ಕಂದನೆ ವಿಠಲ ಅಸುರೆ ಪೂತನಿಯ ಕೊಂದ್ಯೋ ಕೃಷ್ಣ ವಿಠಲ ಅರಸಿ ರುಕ್ಮಿಣಿಗೆ ನೀನರಸನಾದ್ಯೋ ವಿಠಲ ಪಿರಿದಾಗಿ ಶಂಖವ ಪಿಡಿದ್ಯೋ ನೀ ವಿಠಲ ಸರಸಿಜ ಸಂಭವ ಸನ್ನುತ ವಿಠಲ ನಿರತ ಇಟ್ಟಿಗೆ ಮೇಲೆ ನಿಂತ್ಯೋ ನೀ ವಿಠಲ ಕಂಡೆ ನಾ ನಿನ್ನ ವೆಂಕಟನೆಂಬ ವಿಠಲ ಕುಂಡಗೋಳಕರಿಗೊಲಿದು ಬಂದ ವಿಠಲ ಪಾಂಡುರಂಗ ಕ್ಷೇತ್ರ ಪಾಲನೆ ವಿಠಲ ಪುಂಡರೀಕಾಕ್ಷ ಶ್ರೀ ಪುರಂದರ ವಿಠಲ
ದಾಸ ಸಾಹಿತ್ಯ ಪ್ರಕಾರ
ಬರೆದವರು