ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ

ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ

(ಭೈರವಿ ರಾಗ ತೀನ್ ತಾಳ ) ಶರಣರಕ್ಷಕನಹುದೊ ಸಿರಿಯಲೋಲನೆ ಪೂರ್ಣ ||ಪ|| ವರ ಪಾಂಡವರ ಮಿತ್ರ ಕರುಣಾನಂದದ ಗಾತ್ರ ಅರವಿಂದನೇತ್ರ ಸುರಮುನಿಸ್ತೋತ್ರ ಹರಿ ನಿನ್ನ ಚರಿತ್ರ ಪರಮಪವಿತ್ರ ||೧|| ವಿದುರವಂದಿತ ದೇವ ಬುಧಜನ ಪ್ರಾಣಜೀವ ಯದುಕುಲೋದ್ಭವ ನೀನೇ ಶ್ರೀಮಾಧವ ಸದಾ ಸದ್ಗೈಸುವ ಆದಿಕೇಶವ ||೨|| ಆನಂದ ಘನಲೋಲ ನೀನೆ ಸರ್ವಕಾಲ ಅನಾಥರನುಕೂಲ ಶರಣಾಗತವತ್ಸಲ ದೀನ ಮಹಿಪತಿ ಸ್ವಾಮಿ ನೀನೇ ಕೃಪಾಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು