Skip to main content

ಶರಣಂಬೆ ವಾಣಿ ಪೊರೆಯ ಕಲ್ಯಾಣಿ

( ರಾಗ ಕಲ್ಯಾಣಿ ಆದಿತಾಳ)

ಶರಣಂಬೆ ವಾಣಿ ಪೊರೆಯ ಕಲ್ಯಾಣಿ ||ಪ||

ವಾಗಭಿಮಾನಿ ವರ ಬ್ರಹ್ಮಾಣಿ
ಸುಂದರವೇಣಿ ಸುಚರಿತ್ರಾಣಿ ||

ಜಗದೊಳು ನಿಮ್ಮ ಪೊಗಳುವೆನಮ್ಮ
ಹರಿಯ ತೋರಿಸೆಂದು ಪ್ರಾರ್ಥಿಪೆನಮ್ಮ ||

ಪಾಡುವೆ ಶ್ರುತಿಯ ಬೇಡುವೆ ಮತಿಯ
ಪುರಂದರವಿಠಲನ ಸೋದರಸೊಸೆಯ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: