ಶಕ್ತನಾದರೆ ನೆಂಟರೆಲ್ಲ ಹಿತರು

ಶಕ್ತನಾದರೆ ನೆಂಟರೆಲ್ಲ ಹಿತರು

( ರಾಗ ಕಾಂಭೋಜ ಝಂಪೆ ತಾಳ) ಶಕ್ತನಾದರೆ ನೆಂಟರಲ್ಲ ಹಿತರು ||ಪ || ಅಶಕ್ತನಾದರೆ ಅವರೆ ವೈರಿಗಳು ಲೋಕದಲಿ ||ಅ || ಕಮಲಾರ್ಕನಲಿರುವ ಕಡು ನೆಂಟತನದಿಂದ ವಿಮಲ ಜಲದೊಳಗೆ ಓಡಾಡುತಿಹುದು ಕ್ರಮಗೆಟ್ಟು ನೀರಿಂದ ತಡಿಗೆ ಬೀಳಲು ರವಿಯ ಅಮಿತ ಕಿರಣಗಳಿಂದ ಕಂದಿ ಹೋಗುವುದು || ವನ ಸುತ್ತಿ ಸುಡುವಾಗ ವಾಯು ಬೀಸಲು ಉರಿಯು ಘನ ಪ್ರಜ್ವಲಿಸುತಿಹುದು ಗಗನಕಡರಿ ಮನೆಯೊಳಿಹ ದೀಪಕ್ಕೆ ಮಾರುತನು ಸೋಂಕಿದರು ಘನ ಶಕ್ತಿಯುಡುಗಿ ತಾ ನಂದಿಹೋಗುವುದು || ಕರಿಯ ಕಾಯಿದ ಹರಿಯ ಕರುಣ ತಪ್ಪಿದ ಮೇಲೆ ಮರೆಯ ಹೊಕ್ಕರು ಕಾಯ್ವ ಮಹಿತರಾರಯ್ಯ ವರದ ಶ್ರೀ ಪುರಂದರವಿಠಲನು ಒಲಿದಿರಲು ಸರ್ವ ಜನರೆಲ್ಲ ಮೂಜಗದಿ ಹಿತರು || ( ಇನ್ನೊಂದು ಆವೃತ್ತಿಯಲ್ಲಿ ಕಡೆಯ ನಾಲ್ಕು ಸಾಲುಗಳು ಹೀಗಿವೆ ವರದ ಶ್ರೀ ಪುರಂದರವಿಠಲನು ಒಲಿದಿರಲು ಸರ್ವ ಜನರೆಲ್ಲ ಮೂಜಗದಿ ಹಿತರು ಕರಿಯ ಕಾಯಿದ ಹರಿಯ ಕರುಣ ತಪ್ಪಿದ ಮೇಲೆ ಮೊರೆಯ ಹೊಕ್ಕರು ಕಾಯ್ವ ಮಹಿತರಾರಯ್ಯ || )
ದಾಸ ಸಾಹಿತ್ಯ ಪ್ರಕಾರ
ಬರೆದವರು