ವಾದಿರಾಜಗುರು ನೀ ದಯಮಾಡದೆ

ವಾದಿರಾಜಗುರು ನೀ ದಯಮಾಡದೆ

------ ರಾಗ-ಧನಶ್ರೀ (ಜೀವನಪುರಿ) ಆದಿತಾಳ(ತೀನ್ ತಾಲ್) ವಾದಿರಾಜಗುರು ನೀ ದಯಮಾಡದೆ ||ಪ|| ಈ ದುರಿತವ ಕಳೆಯದಿರ್ಪರ್ಯಾರೊ ||ಅ.ಪ|| ಕಲಿಯ ಬಾಧೆಯು ತಾ ವೆಗ್ಗಳವಾಗಿದೆ ಇಳೆಯೊಳು ಯತಿಕುಲತಿಲಕ ಕೃಪಾಳೊ ||೧|| ದೇಶಿಕಾರ್ಯ ವಾಗೀಶ ಕುವರ ತವ ದಾಸ ಸಮೂಹವ ನೀ ಸಲಹೈ ಸದಾ ||೨|| ಜನ್ಮಾದಿವ್ಯಾದ್ಯುನ್ಮಾದ ಭ್ರಮ ನಿಮ್ಮೊರೆ ಹೊಕ್ಕರಿಗಿನ್ಮೊದಲುಂಟೆ ||೩|| ನೀ ಗತಿಯೆಂದನುರಾಗದಿ ನಂಬಿದ ಭೋಗಿಪುರೀಶನ ರೋಗವ ಕಳೆದೆ ||೪|| ಯಲರುಣಿ ಭಯಕಂಜಿ ನಿಮ್ಮಾಸನ ಕೆಳಗಿರೆ ಕಂಡದನುಳುಹಿದೆ ಕರುಣಿ ||೫|| ಗರಮಿಶ್ರಿತ ನರಹರಿ ನೈವೇದ್ಯವ ಅರಿತು ಉಂಡು ಅದನರಗಿಸಿಕೊಂಡೆ ||೬|| ಹಯವದನನ ಪದದ್ವಯ ಭಜಕಾಗ್ರಣಿ ದಯದಿ ವಿಪ್ರನಿಗೆ ನಯನವನಿತ್ತೆ ||೭|| ಮೋದ ಮುನಿಮತ ಮಹೋದಧಿ ಪೂರ್ಣ ವಿಧೋದಯ ಶರಣರ ಕಾದುಕೊ ದೊರೆಯೆ ||೮|| ಅರ್ಥಿಗಳಿಗೆ ಪರಮಾರ್ಥವ ತೋರಿಸಿ ತೀರ್ಥ ಪ್ರಬಂಧವ ಕೀರ್ತನೆಗೈದೆ ||೯|| ಯಮಿವರನೆ ತ್ರಿವಿಕ್ರಮ ರಥೋತ್ಸವ ಸಮಯವಿದೆಂದುತ್ಕ್ರಮಣವ ತೊರೆದೆ ||೧೦|| ಬಂದು ಕರೆಯೆ ಪುರಂದರನಾಳ್ಗಳು ಹಿಂದಟ್ಟಿದೆ ಕರ್ಮೇಂದ್ರಿಯಗಳರಸನೆ ||೧೧|| ಭೂಮಿಪರುಪಟಳಕಾಮಹಿನಾಥನು ತಾ ಮೈಮರೆದಿರೆ ನೀ ಮುದವಿತ್ತೆ ||೧೨|| ನಿನ್ನೊಶನಾದ ಜಗನ್ನಾಥವಿಠಲನ ಇನ್ನಾದರು ತೋರೆನ್ನ ಮನದಲಿ ||೧೩||
ದಾಸ ಸಾಹಿತ್ಯ ಪ್ರಕಾರ
ಬರೆದವರು