Skip to main content

ವಹವ್ವಾರೆ ಮೆಣಸಿನಕಾಯಿ

( ರಾಗ ನಾದನಾಮಕ್ರಿಯೆ ಏಕತಾಳ)

ವಹವ್ವಾರೆ ಮೆಣಸಿನಕಾಯಿ
ಒಣರೊಟ್ಟಿಗೆ ತಂದೆನೊ ತಾಯಿ ||ಪ||

ಹುಟ್ಟುತಲಿ ಹಸಿರಾಗುತ ಕಂಡೆ
ನಟ್ಟ ನಡುವೆ ಕೆಂಪಾಗುತ ಕಂಡೆ
ಕಟ್ಟೆರಾಯನ ಬಹು ರುಚಿಯೆಂಬೆ ||

ಒಂದೆರಡರೆದರೆ ಬಹು ರುಚಿಯೆಂಬೆ
ಮೇಲೆರಡರೆದರೆ ಬಹು ಖಾರೆಂಬೆ
ಅದು ಎರಡರೆದರೆ ಅತಿ ಖಾರೆಂಬ ||

ಬಡವರಿಗೆಲ್ಲ ನಿನ್ನಾಧಾರ
ಅಡಿಗೆ ಊಟಕ್ಕೆ ನಿನ್ನ ಸಾರ
ಬಾಯಲಿ ಕಡೆದರೆ ಬೆಂಕಿಯ ಖಾರ
ಪುರಂದರ ವಿಠಲನ ನೆನೆಯೊದು ಭಾರ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: