Skip to main content

ವರವೇದಪುರಾಣ ( ಸರಸ್ವತಿ ಸ್ತೋತ್ರ)

(ರಾಗ ನಾಟ)

ವರವೇದ ಪುರಾಣ ವಿವಿಧ ಶಾಸ್ತ್ರಗಳಿಗೆ
ಸರಸಿಜೋದ್ಭವನರಸಿ ಸರಸ್ವತಿದೇವಿಯ
ಪರಮ ಮುಖ್ಯಾಭಿಮಾನಿಯೆಂದು ತಿಳಿದು
ನಿರತ ಭಜಿಸುವ ಜನಕೆ ನಿಜಗತಿಯ ಪಾಲಿಸುವ
ಸಿರಿಯರಸ ಪುರಂದರವಿಠಲ ತಾನೊಲಿವ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: