ಲೇಸು ಲೇಸಾಯಿತೆನ್ನ ಜನುಮ ನೋಡಿ

ಲೇಸು ಲೇಸಾಯಿತೆನ್ನ ಜನುಮ ನೋಡಿ

(ಭೀಮಪಲಾಸ್ ರಾಗ ತೀನ್ ತಾಳ) ಲೇಸು ಲೇಸಾಯಿತೆನ್ನ ಜನುಮ ನೋಡಿ ವಾಸುದೇವನೆ ಬಂದ ಕೈಗೂಡಿ ||ಧ್ರುವ|| ಎನ್ನ ಮಾನಾಭಿಮಾನ ಆದ ಹರಿಯೆ ಇನ್ನು ಇಂಥ ಪುಣ್ಯಕ ನೋಡಿ ಸರಿಯೆ ಧನ್ಯಗೈಸಿದುತ್ತೀರ್ಣಾಗಲರಿಯೆ ಇನ್ನೊಬ್ಬರಿಗೇನು ಮುಚ್ಚುಮರಿಯೆ ||೧|| ಕೋಟಿ ಜನ್ಮದಲಿ ಮಾಡಿದ ಸುಪುಣ್ಯ ನಾಟಿ ಬಂತೆನ್ನೊಳಗಸು ತಾರ್ಕಣ್ಯ ನೀಟದೋರಿತು ಘನ ಸುಚೈತನ್ಯ ನೋಟ ನೆಲೆಗೊಂಡಾಯಿತು ಧನ್ಯ ||೨|| ತಾನೆ ತಾನಾದೆನ್ನೊಳು ಬಂದು ನೋಡಿ ಭಾನುಕೋಟಿ ಪ್ರಕಾಶ ದಯಮಾಡಿ ದೀನ ಮಹಿಪತಿಗೆ ಸ್ವಸುಖ ನೀಡಿ ಮನೋಹರ ಮಾಡಿದ ಮನಗೂಡಿ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು