ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

ಲಾಲಿ ಲಾಲಿ ನಮ್ಮ ಹರಿಯೆ ಲಾಲಿ

(ರಾಗ ಪೀಲು ಆದಿ ತಾಳ ) ಲಾಲಿ ಲಾಲಿ ನಮ್ಮ ಹರಿಯೆ ಲಾಲಿ ||ಪ || ಸುರನರರಿಗೆ ಒಲಿದು ಕರುಣವ ಬೀರುವ ದೊರೆಯೆ ಲಾಲಿ ||ಅ || ರಾಮ ಲಾಲಿ ಮೇಘಶ್ಯಾಮ ಲಾಲಿ ರಮಾಮನೋಹರ ಅಮಿತಸದ್ಗುಣಧಾಮ ಲಾಲಿ || ಕೃಷ್ಣ ಲಾಲಿ ಸರ್ವೋತ್ಕೃಷ್ಟ ಲಾಲಿ ದುಷ್ಟರ ಶಿಕ್ಷಿಸಿ ಶಿಷ್ಟರ ಪೊರೆವ ಸಂತುಷ್ಟ ಲಾಲಿ || ರಂಗ ಲಾಲಿ ಮಂಗಳಾಂಗ ಲಾಲಿ ಗಂಗೆಯ ಪಡೆದ ತುಂಗ ಮಹಿಮ ನರಸಿಂಗ ಲಾಲಿ || ನಂದ ಲಾಲಿ ಗೋಪೀಕಂದ ಲಾಲಿ ಮಂದರಗಿರಿಧರ ಮಧುಸೂದನ ಮುಕುಂದ ಲಾಲಿ || ಶೂರ ಲಾಲಿ ರಣಧೀರ ಲಾಲಿ ಮಾರನಯ್ಯ ನಮ್ಮ ಗುರು ಪುರಂದರವಿಠಲ ಲಾಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು