ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ

ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ

ರಾ ಗ - ಆನಂದಭೈರವಿ : ತಾ ಳ - ಏಕತಾಳ ರಾಯಬಾರೋ ತಂದೆತಾಯಿ ಬಾರೋ ನಮ್ಮನ್ ಕಾಯಿ ಬಾರೋ ಮಾಯಿಗಳ ಮರ್ದಿಸಿದ ರಾಘವೇಂದ್ರ ರಾಯ ಬಾರೋ | ಪ | ಭಾಸುರಚರಿತನೆ ಭೂಸುರವಂದ್ಯನೆ ಶ್ರೀಸುಧೀಂದ್ರಾರ್ಯರ ವರಪುತ್ರ ರಾಯ ಬಾರೋ | ಶ್ರೀಸುಧೀಂದ್ರಾರ್ಯರ ವರಪುತ್ರನೆನಿಸಿದ ದೇಶಿಕರೊಡೆಯನೆ ರಾಘವೇಂದ್ರ ರಾಯ ಬಾರೋ | ೧ | ವಂದಿಪ ಜನರಿಗೆ ಮಂದಾರತರುವಂತೆ ಕುಂದದಭೀಷ್ಟೆಯ ಸಲಿಸುತಿಪ್ಪ ರಾಯ ಬಾರೋ | ಕುಂದದಭೀಷ್ಟೆಯ ಸಲಿಸುತಿಪ್ಪ ಸುರಮಣಿ ಮಂದನ ಮತಿಗೆ ರಾಘವೇಂದ್ರ ರಾಯ ಬಾರೋ | ೨ | ಆರು ಮೂರು ಏಳು ನಾಲ್ಕು ಎಂಟು ಗ್ರಂಥಸಾರಾರ್ಥತೋರಿಸಿದಿ ಸರ್ವರಿಗೆ ನ್ಯಾಯದಿಂದ ರಾಯ ಬಾರೋ | ತೋರಿಸಿದಿ ಸರ್ವರಿಗೆ ನ್ಯಾಯದಿಂದ ಸರ್ವಜ್ಞಸೂಗಳರಸನೆ ರಾಘವೇಂದ್ರ ರಾಯ ಬಾರೋ | ೩| ರಾಮಪದಸರಸೀರುಹಭೃಂಗ ಭಕ್ತಕೃಪಾಪಾಂಗ ಭ್ರಾಮಕಜನರ ಸನ್ಮಾನಭಂಗ ರಾಯ ಬಾರೋ | ಭ್ರಾಮಕಜನರ ಸನ್ಮಾನಭಂಗ ಮಾಡಿದ ಧೀಮಂತರೊಡೆಯನೆ ರಾಘವೇಂದ್ರ ರಾಯ ಬಾರೋ | ೪ | ಭೂತಳನಾಥನ ಭೀತಿಯ ಬಿಡಿಸಿದೆ ಪ್ರೇತತ್ವ ಕಳೆದೆ ಮಹಿಷಿಯ ರಾಯ ಬಾರೋ | ಪ್ರೇತತ್ವ ಕಳೆದೆ ಮಹಿಷಿಯ ಶ್ರೀ ಜಗನ್ನಾಥವಿಟ್ಠಲನ ಪ್ರೀತಿಪಾತ್ರ ರಾಘವೇಂದ್ರ ರಾಯ ಬಾರೋ | ೫ |
ದಾಸ ಸಾಹಿತ್ಯ ಪ್ರಕಾರ
ಬರೆದವರು