ರಾಮ ನಾಮವ ನುಡಿ ನುಡಿ

ರಾಮ ನಾಮವ ನುಡಿ ನುಡಿ

(ರಾಗ ನಾದನಾಮಕ್ರಿಯ ಆದಿತಾಳ) ರಾಮನಾಮವ ನುಡಿ ನುಡಿ ಕಾಮಕ್ರೋಧಗಳ ಬಿಡಿ ಬಿಡಿ ಶ್ರೀರಾಮ ನಾಮವ ನುಡಿ ನುಡಿ ಗುರುಗಳ ಚರಣವ ಹಿಡಿ ಹಿಡಿ ಹರಿ ನಿರ್ಮಾಲ್ಯವ ಮುಡಿ ಮುಡಿ ಕರಕರೆ ಭವಪಾಶವ ಕಡಿ ಕಡಿ ,ಬಂದ ದುರಿತವನೆಲ್ಲ ಹೊಡಿ ಹೊಡಿ ಸಜ್ಜನರ ಸಂಗವ ಮಾಡೋ ಮಾಡೋ ದುರ್ಜನರ ಸಂಗವ ಬಿಡೋ ಬಿಡೋ ಅರ್ಜುನ ಸಾರಥಿ ರೂಪವ ನೋಡೋ ನೋಡೋ, ಹರಿ- ಭಜನೆಯಲಿ ಮನ ಇಡೋ ಇಡೋ ಕರಿರಾಜವರದನ ಸಾರೋ ಸಾರೋ ಶ್ರಮಪರಿಹರಿಸೆಂದು ಹೋರೋ ಹೋರೋ ವರದಭೀಮೇಶನ ದೂರದಿರೋ, ನಮ್ಮ ಪುರಂದರ ವಿಠಲನ ಸೇರೋ ಸೇರೋ
ದಾಸ ಸಾಹಿತ್ಯ ಪ್ರಕಾರ
ಬರೆದವರು