ರಾಮರಾಮೆನ್ನಿರೋ

ರಾಮರಾಮೆನ್ನಿರೋ

( ರಾಗ ಮಧ್ಯಮಾವತಿ ಅಟ ತಾಳ) ರಾಮ ರಾಮೆನ್ನಿರೋ, ಇಂಥಾ ಸ್ವಾಮಿಯ ನಾಮವ ಮರೆಯದಿರೊ ||ಪ || ತುಂಬಿದ ಪಟ್ಟಣಕೊಂಭತ್ತು ಭಾಗಿಲು ಸಂಭ್ರಮದರಸುಗಳೈದು ಮಂದಿ ಡಂಭಕತನದಿಂದ ಕಾಯುವ ಜೀವವ ನಂಬಿ ನೆಚ್ಚಿ ನೀವು ಕೆಡಬೇಡಿರೊ || ನೆಲೆ ಇಲ್ಲದ ಕಾಯ ಎಲುವಿನ ಹಂದರ ಬಲಿದು ಸುತ್ತಿದ ಚರ್ಮದ ಹೊದಿಕೆ ಮಲಮೂತ್ರಂಗಳು ಕೀವು ಕ್ರಿಮಿಗಳುಳ್ಳ ಹೊಲಸು ತೊಗಲ ಮೆಚ್ಚಿ ಕೆಡಬೇಡಿರೊ || ಹರಿ ಬ್ರಹ್ಮ ಸುರರಿಗೆ ವಂದ್ಯನು ಆಗಿಪ್ಪ ಹರಿ ಸರ್ವೋತ್ತಮನೆಂದೆನ್ನಿರೊ ಪುರಂದರವಿಠಲನ ಚರಣವ ಭಜಿಸಿರೊ ದುರಿತ ಭಯಗಳಿಂದ ದೂರಾಗಿರೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು