ರಾಮನ ನೋಡಿರೈ

ರಾಮನ ನೋಡಿರೈ

( ರಾಗ ಭೈರವಿ(ಬಿಲಾವಲ್ ) ಆದಿತಾಳ (ಕಹರವಾ)) ರಾಮನ ನೋಡಿರೈ , ನಿಮ್ಮಯ ಕಾಮಿತ ಬೇಡಿರೈ ತಾಮರಸಸಖ ಸುವಂಶಾಬ್ಧಿಶರತ್ಸೋಮ , ಕಮಲಾಧಾಮ ||ಪ|| ಧಾತನನುಜ್ಞದಿ ದೇವತ್ವಷ್ಟ್ರ ನಿರ್ಮಿಸಿದ , ಅಜ ಪೂಜಿಸಿದ ಜ್ಯೋತಿರ್ಮಯ ಜಾಬಾಲಿ ಮುನಿಯ ತಪವರಿದ , ಕಾಮಿತ ನೆರೆದ ಭೂತಾಧಿಪನ ಭವನದೊಳಗರ್ಚನೆಗೊಂಡ , ಧೃತಕೋದಂಡ ಮಾತಂಗಾರಿ ವಿರೋಧಿಯ ಜನಕನ ಮೇಧಾ ಕಾರಕೆ ಪೋದ ||೧|| ಸೌಭರಿ ಮುನಿಪಗೆ ಸೌಖ್ಯವ ಕರುಣಿಸಿಕೊಟ್ಟ , ಜಗಕತಿದಿಟ್ಟ ನಾಭಿಜನ್ಮನಿಹ ನಗರಾಸ್ಥಾನಕೆ ಬಂದ , ಶುಭಗುಣವೃಂದ ವೈಭವದಿಂದ ಅಯೋಧ್ಯಾನಗರದಿ ಮೆರೆದ , ಕಾಮಿತಗರೆದ ಸಾಭಿಮಾನದಲಿ ಸತಿಯಳಿಗಿತ್ತನು ವರವ , ದೇವರದೇವ ಗರುವ ||೨|| ಜಾಂಬವಂತನಿಗೆ ಜಾನಕಿರಮಣನು ಈತ -ನಿತ್ತನುಧ್ಯಾತಾ ಸಂಭ್ರಮದಲಿ ವೇದಗರ್ಭಮೊಡನಾಡ್ದ , ಮುಕ್ತಿಯ ನೀಡ್ದ ಕುಂಭಿನೀಶ್ವರನ ಕೋಶದಿ ಬಹುದಿನವಾಸ -ವೆಸಗಿದನೀಶ ನಂಬಿ ತುತಿಸುತಿಹ ನರಹರಿ ಮುನಿಪಗೆ ಒಲಿದ , ಮೋದದಿ ನಲಿದ ||೩|| ಅಲವ ಬೋಧಮುನಿ ಅತಿ ಮೋದದಲರ್ಚಿಸಿದ , ಸಲೆ ಮೆಚ್ಚಿಸಿದ ಇಳೆಯೊಳು ಬಹುಯತಿಗಳ ಕರಪೂಜಿತನಾದ , ಲೀಲಾವಿನೋದ ಬಲು ನಂಬಿದ ಭಕುತರ ಕಲಿ-ಮಲಗಳ ಕಳೆದ , ಮನದೊಳು ಪೊಳೆದ ಸುಲಲಿತಗುಣನಿಧಿ ವಸುಧೇಂದ್ರಾರ್ಯರ ಪ್ರಿಯ , ಕವಿಜನಗೇಯ ||೪|| ವಾರಿಧಿ ಬಂಧನ ವಾನರ ನಾಯಕನಾಳ್ದಾ , ದೈತ್ಯರ ಸೀಳ್ದ ನಾರದಮುಖ ಮುನಿನಮಿತಾ ಪದಾಂಬುಜನೀತ, ತ್ರಿಗುಣಾತೀತ ಆರಾಧಿಪರಿಗೆ ಅಖಿಳಾರ್ಥಗಳನು ಕೊಡುವ , ದುರಿತವ ತಡೆವ ನೀರಜಾಕ್ಷ ಜಗನ್ನಾಥವಿಠಲ ನಿಶ್ಚಿಂತ , ಸೀತಾಕಾಂತ ||೫||
ದಾಸ ಸಾಹಿತ್ಯ ಪ್ರಕಾರ
ಬರೆದವರು