ರಾಘವೇ೦ದ್ರಯತಿಸಾರ್ವಭೌಮ
ರಾಗ - ಧನ್ಯಾಸಿ (ಬಿಲಾವಲ್) ಆದಿತಾಳ( ಕಹರವಾ)
ರಾಘವೇ೦ದ್ರಯತಿಸಾರ್ವಭೌಮ ದುರಿತೌಘದೂರ ತೇ ನಮೋ ನಮೋ
ಮಾಗಧರಿಪುಮತ ಸಾಗರಮೀನ ಮಹಾಘವಿನಾಶನ ನಮೋ ನಮೋ ||ಪ||
ಶ್ಲಾಘಿತಗುಣಗಣ ಸೂರಿಪ್ರಸ೦ಗ ಸದಾಗಮಜ್ಞ ತೇ ನಮೋ ನಮೋ
ಮೇಘಶ್ಯಾಮಲ ರಾಮಾರಾಧಕಮೋಘ ಬೊಧ ತೇ ನಮೋ ನಮೋ || ೧ ||
ತು೦ಗಭದ್ರ ಸುತರ೦ಗಿಣಿತೀರಗ ಮ೦ಗಳಚರಿತ ಶುಭಾ೦ಗ ನಮೋ
ಇ೦ಗಿತಜ್ಞ ಕಾಳಿ೦ಗಮರ್ದನ ಯದುಪು೦ಗವ ಹೃದಯಸುರ೦ಗ ನಮೋ
ಸ೦ಗಿರಚಿಹ್ನಿತ ಶೃ೦ಗಾರಾನನ ತಿ೦ಗಳ ಕುರುಣಾಪಾ೦ಗ ನಮೋ
ಗಾ೦ಗೇಯ ಸಮಭಾ೦ಗ ಕುಮತ ಮಾತ೦ಗ ಸ೦ಘ ಶಿತಪಿ೦ಗ ನಮೋ || ೨ ||
ಕೋವಿದಮಸ್ತಕಶೋಭಿತಮಣಿ ಸ೦ಭಾವಿತಮಹಿಮ ಪಾಲಯ ಮಾ೦
ಸೇವಿ(/ವಾ?)ಪರ ಸರ್ವಾರ್ಥಪ್ರದ ಬೃ೦ದಾವನಮ೦ದಿರ ಪಾಲಯ ಮಾ೦
ಭಾವಜಮಾರ್ಗಣ ಭುಜಗವಿನಾಯಕ ಭಾವಜ್ಞಪ್ರಿಯ ಪಾಲಯ ಮಾ೦
ಕೇವಲ ನುತಜನ ಪಾವನರೂಪ ಸದಾವಿನೋದಿ ಹೇ ಪಾಲಯ ಮಾ೦ || ೩ ||
ಶ್ರೀ ಸುಧೀ೦ದ್ರ ಕರಜಾತ ನಮೋ ನಮೋ ಭೂಸುರನುತ ವಿಖ್ಯಾತ ನಮೋ
ದೇಶಿಕವರಸ೦ಸೇವ್ಯ ನಮೋ ನಮೋ ದೋಷವಿವರ್ಜಿತ ಕಾವ್ಯ ನಮೋ
ಕ್ಲೇಶಿತಜನಪರಿಪಾಲ ನಮೋ ನಮೋ ಭೂಕರುಣಾಶೀಲ ನಮೋ
ವ್ಯಾಸರಾಯ ಪದಭಕ್ತ ನಮೋ ನಮೋ ಶಾಶ್ವತಧರ್ಮಾಸಕ್ತ ನಮೋ || ೪ ||
ಸನ್ನುತ ಮಹಿಮ ಜಗನ್ನಾಥವಿಠ್ಠಲ ಸಹ್ನಿತಮಾನಸ ಜಯ ಜಯ ಭೋ
ಚಿಹ್ನಿತ ದ೦ಡಕಮ೦ಡಲ ಪು೦ಡ್ರ ಪ್ರಸನ್ನ ಭಯಾಪಹ ಜಯ ಜಯ ಭೋ
ಮಾನ್ಯ ಮಹಾತ್ಮ ಪ್ರಸನ್ನವದನ ಕಾರುಣ್ಯ ಪಯೋನಿಧಿ ಜಯ ಜಯ ಭೋ
ಧನ್ಯ ಕ್ಷಮಾಸ೦ಪನ್ನ ಧರಾಮರ ಶರಣ್ಯ ಸದಾರ್ಚಿತ ಜಯ ಜಯ ಭೋ || ೫ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments