ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ

ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ

ರಾಗ - ಪೂರ್ವಿ : ತಾಳ - ಆದಿತಾಳ ರಥವಾನೇರಿದ ರಾಘವೇಂದ್ರ | ಸದ್ಗುಣಗಳ ಸಾಂದ್ರ | ಪ | ಸತತ ಮಾರ್ಗದಿ ಸಂತತ ಸೇವಿಪರಿಗೆ | ಅತಿಹಿತದಲಿ ಮನೋರಥವ ಕೊಡುವೆನೆಂದು | ಅ ಪ | ಚತುರ ದಿಕ್ಕು ವಿದಿಕ್ಕುಗಳಲ್ಲಿ | ಚರಿಪಾಜನರಲ್ಲಿ ಮಿತಿಲ್ಲದೆ ಬಂದು ಓಲೈಸುತಲಿ | ವರವಾ ಬೇಡುತಲಿನುತಿಸುತ ಪರಿಪರಿ ನತರಾಗಿ ಹರಿಗೆ ಗತಿಪೇಳದೆ ಸರ್ವಥಾ ಬಿಡೆನೆಂದು | ೧ | ಅತುಳ ಮಹಿಮಾನಾ ದಿನದಲ್ಲಿ | ದಿತಿಜಾವಂಶದಲಿ ಉತ್ಪತ್ತಿಯಾಗಿ ಉಚಿತಾದಲ್ಲಿ | ಉತ್ತಮ ಮತಿಯಲ್ಲಿಅತಿಶಯವಿರುತಿರೆ ಪಿತನ ಬಾಧೆಗೆ | ಮನ್ಮಥ ಪಿತನೊಲಿಸಿದ ಜಿತ ಕರುಣದಲಿ | ೨ | ಪ್ರಥಮ ಪ್ರಲ್ಹಾದ ವ್ಯಾಸಮುನಿಯೆ | ಯತಿ ರಾಘವೇಂದ್ರ ಪತೀತರೋದ್ಧಾರಿಯೆ ಪಾವನಕಾರಿಯೇ | ಕರಮುಗಿವೆನು ದೊರೆಯೆ | ಕ್ಷಿತಿಯೊಳು ಗೋಪಾಲವಿಟ್ಠಲನ ಸ್ಮರಿಸುತ | ಪ್ರತಿ ಮಂತ್ರಾಲಯದೊಳು ಅತಿ ಮೆರೆವ | ೩ |
ದಾಸ ಸಾಹಿತ್ಯ ಪ್ರಕಾರ
ಬರೆದವರು