ರಕ್ಷಿಸೊ ಶ್ರೀಶ ಶ್ರೀನಿವಾಸ

ರಕ್ಷಿಸೊ ಶ್ರೀಶ ಶ್ರೀನಿವಾಸ

( ರಾಗ- ಮಧ್ಯಮಾವತಿ(ಸಾರಂಗ) ಅಟತಾಳ(ದೀಪಚಂದಿ) ) ರಕ್ಷಿಸೊ ಶ್ರೀಶ ಶ್ರೀನಿವಾಸ ||ಪ|| ರಕ್ಷಿಸೆನ್ನ ಪದ್ಮಾಕ್ಷ ತ್ರಿಜಗಾ- ಧ್ಯಕ್ಷ ಖಳಜನಶಿಕ್ಷ ಪಾಂಡವ- ಪಕ್ಷ ಕರುಣಕಟಾಕ್ಷದಲಿ ನೀ- ನಿಕ್ಷಿಸುತ ಪೊರೆ ಪಕ್ಷಿವಾಹನ||ಅ.ಪ|| ಕೊಂಚ ಮತಿಯಲಿ ಕುಜನರ ಸೇರಿ ಸಂಚರಿಸುತಲಿ ದೀನನಾದೆ ಪಂಚಶರ ಸ್ಮರ ವಂಚಿಸುತ ಬಿಡೆ ಚಂಚಲಾಕ್ಷೇರ ಪಂಚು ನೋಟದ ಮಿಂಚಿಗೆನ್ನ ಮನ ಚಂಚಲವು ಪುಟ್ಟಿ ವಂಚಿಸೇ ಯಮನಂಚಿಗೆ ತಲುಪಿದೆ ||೧|| ಕಿಟ್ಟಗಟ್ಟಿದ ಕಬ್ಬಿಣದಂತೆ ಕೆಟ್ಟ ಕಿಲ್ಬಿಷದ ಕೂಪದಿ ಬಿದ್ದು ಧಿಟ್ಟ ನಿನ್ನಯ ಗುಟ್ಟು ತಿಳಿಯದೆ ಹೊಟ್ಟೆಗೋಸುಗ ಕೆಟ್ಟೆ, ಕುಜನರ ಥಟ್ಟನೆ ಕಾಲಗಟ್ಟಿ ಬಹು ಶ್ರಮ- ಪಟ್ಟು ನಾ ಕಂಗೆಟ್ಟೆ ಪ್ರತಿದಿನ || ೨|| ಶ್ರೀ ಕಮಲೇಶ ಹೃತ್ಪದ್ಮದಿ- ನೇಶಪ್ರಕಾಶ ಬೇಗನೆ ಬಂದು ಯಾಕೆ ತಡವೆನ್ನ ವಾಕ್ಕು ಲಾಲಿಸಿ ಜೋಕೆಯಿಂದಲಿ ನೀ ಕರವ ಪಿಡಿ- ದಾ ಕುಚೇಲನ ಸಾಕಿದ ಪರಿ ಶ್ರೀಕರ ಜಗನ್ನಾಥವಿಠಲ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು