ರಂಗ ದಧಿಯ ಮಥಿಸುವಂತರಲ್ಲಿ

ರಂಗ ದಧಿಯ ಮಥಿಸುವಂತರಲ್ಲಿ

( ರಾಗ ಕಾಪಿ ಆದಿ ತಾಳ)

 

ರಂಗ ದಧಿಯ ಮಥಿಸುವಂತರಲ್ಲಿ , ಅವರು ಒ-

ದಗಿ ಹೇಳಲು ಬಂದರಿಂತಿಲ್ಲಿ ನಿನ್ನ ಸೊ-

ಬಗು ಗೋವಳರ ಕೂಡ ತಾ ಹೋದ್ಯಂತೆ

(ರಂಗ ಚತುರತನದಿ ಬೆಣ್ಣೆ ಮೆದ್ಯಂತೆ )

ನಾ ಸುಳಸಿ , ಇಂಥಾ ಮಗನು ಯಾಕಾದ್ಯೊ ||

 

ಅಮ್ಮ, ಕತ್ತಲೆ ಮನೆಯೊಳಗೆ ಬರಲು

ಅಲ್ಲಿ ಬೆಕ್ಕು ಮೊಸರು ಕುಡಿಯುತಿರಲು ನಾನು

ಹೊಕ್ಕು ಹೊಕ್ಕು ಹೊರಡಿಸಿ ಬಂದೆ ಮತ್ತೆ

ಬೆಣ್ಣೆ ಮೆಲ್ಲಲಿಲ್ಲ ಅಂಥಾ ಮಗನು ನಾನಲ್ಲ ||

 

ರಂಗ , ಅತ್ತೆ ಮನೆಯವರಂತಲಿ

ಅವರ ಹತ್ತಿಲಿ ಹೋಗಿ ನಿಂತಿದ್ದೆಂತೆ ನೀನು

ಅವರ ಚಿತ್ತವ ಪಲ್ಲಟ ಮಾಡಿ ಹೋದ್ಯಂತೆ

ನಾ ಸುಳಸಿ ಇಂಥಾ ಮಗನು ಯಾಕಾದ್ಯೋ ಕೃಷ್ಣಯ್ಯ ||

 

ಅಮ್ಮ ಕತ್ತಲೆ ಮನೆಯೊಳಗೆ ಬರಲು

ಅತ್ತೆ ಕತ್ತಲೆ ಗುಮ್ಮನ ಕಂಡು ಅಂಜಿ

ಗುಮ್ಮ ಮುಂದಕ್ಕೆ ಬಂದನೆಂದು ಅಡಗಿ

(ನಿತ್ತ ಗುಮ್ಮನ ಓಡಿಸಿದೆ )

ಅವರಲ್ಲಿ ಅಂಥಾ ಮಗನು ನಾನಲ್ಲ ||

 

ರಂಗ ಮೌನಗೌರಿ ಮೋಸ

ಅವರ ಮಾನಭಂಗವ ಮಾಡಿದ್ಯಂತೆ

ಅವರ ಸೀರೆಯ ಕದ್ದು ವೈದ್ಯಂತೆ ನೀನು

ಅಂಥಾ ದೂರ ಹೇಳಲಿ ಬಂದರೆ ತಾಳಲಾರೆ

ರಂಗಯ್ಯ ಇಂಥಾ ಮಗನು ಯಾಕಾದ್ಯೊ ||

 

ಅಮ್ಮ ಯಮುನಾ ಮಧ್ಯದಲಿ

ಚೆಂಡು ಒಯ್ದು ಆಡುತಿದ್ದೆ ನಾನು

ಚೆಂಡು ಹುಡುಕಲಿ ಹೋದರೆ ಅಲ್ಲಿ ಬಂತು

ಅಂಥಾ ಕೀರ್ತಿ ಅಂಥಾ ಮಗನು ನಾನಲ್ಲ ||

 

ರಂಗ ಇಂಥ ದೂರು ನನ್ನ ಮಾತು

ಕೇಳು ನೀನು ಮನ್ನಿಸಿ ಮಾತನಾಡು

ನೀನು ಚೆನ್ನಪುರಂದರವಿಠಲರಾಯ

ನೀನು ಅಂಥಾ ಮಗನು ಯಾಕಾದ್ಯೊ ||

ದಾಸ ಸಾಹಿತ್ಯ ಪ್ರಕಾರ
ಬರೆದವರು