ರಂಗ ಕೊಳಲಲೂದಲಾಗಿ

ರಂಗ ಕೊಳಲಲೂದಲಾಗಿ

ರಂಗ ಕೊಳಲನೂದಲಾಗಿ. ರಾಗ: ಆರಭಿ. ಏಕ ತಾಳ. ಪಲ್ಲವಿ: ರಂಗ ಕೊಳಲನೂದಲಾಗಿ ಮಂಗಳಮಯವಾಯಿತು ಧರೆ ಜಗಂಗಳು ಚೈತನ್ಯ ಮರೆದು ಅಂಗ ಪರವಶವಾದುವು ಚರಣ 1: ತೀಡಿದ ಮಾರುತ ಮಂದಗತಿಗೈದ ಪಾಡಿದ ಅಲರು ಬಲ ಗೊಂಚಲು ಬಿಡೆ ಪಾಡಲೊಲ್ಲವಳಿ ಕುಲಗಳು ಪಾಡಿದ ಮಾಮರ ಚಿಗುರೊಡೆಯದು ಹೇಡಿ ಕೊಂಡವು ಜಾಣ್ವಕ್ಕಿ ಗಿಳೀ ಮಾತಾಡದೆ ಕಳೆ ಕುಂದಿದುವು ಕೋಗಿಲೆ ಓಡಾಟ ವೈರಾಟ ಬಿಟ್ಟು ಖಗ ಮೃಗ ಕಾಠ ನಿದ್ರಾ ವಶವಾದುವು 2: ತಳದುದಕ ಉಕ್ಕೇರಿ ಬಂದುವು ತುಳುಕಿ ಚೆಲ್ಲಾಡಿ ನಿಂದಳೇ ಯಮುನೆ ಮೇಲೆ ಮೇಲೋಡಿ ಮೇಘಾಳಿ ಧಾರಿಟ್ಟುವು ಕಲ್ಲು ಕರಗಿ ನೀರಾದುವು ನಳಿನ ಚಂಪಕ ನಾಗ ಪುನ್ನಾಗ ಪಾಟಲ ಶಾವಂತಿಗೆ ಕುಂದ ಬಕುಳವು ಮಾಲತಿ ಜಾಜಿ ಪರಿಮಳ ಕೂಡಿತು ನೀಲಾಂಗನಂಘ್ರಿಗೆರಗಿದವು 3: ಮುದ್ದು ಮೋಹನನ ಮಂಜುಳ ಸಂಗೀತ ಸದ್ದನಾಲಿಸಿ ಗೋಪಾಂಗನೆಯರೆಲ್ಲ ಬುದ್ಧಿ ಸೂರಾಡಿ ಆನಂದ ವಾರಿಧಿಯಲ್ಲಿ ಬಿದ್ದು ಪರವಶರಾದರು ಸಿದ್ಧ ಮುನಿಜನರಿದ್ದ ಸಮಾಧಿಯೊಳೆದ್ದು ಕುಣಿದರು ಎದುರೆದುರಾಗಿ ಕದ್ದುಗೆಯ ರಸನೋಲೈಸಿ ಕೊಂಡರು ಗೆದ್ದರು ಭವ ಸಮುದ್ರವ 4: ಕೆಚ್ಚಲು ಬಿಗಿದು ತೊರೆಯಲು ಮೊಲೆಯು ವತ್ಸಗಳೊಡಲಾಸೆಯು ತೊರೆದೆಳೆಹುಲ್ಲ ಕಚ್ಚಿರಲ್ಲಲ್ಲಿ ನಿಂದುವು ಗೋವ್ಗಳು ಪುಚ್ಛವ ನೆಗಹಿ ನೀಂಟಿಸಿ ಅಚ್ಯುತನಾಕೃತಿ ನೋಡಲು ಸುರರಿಗೆ ಆಶ್ಚರ್ಯವಾಯಿತು ನಾವು ಕಂಡೆವೆಂದು ಮೆಚ್ಚಿ ಮುಕುಂದನ ಲೀಲಾವಿನೋದಕೆ ಹೆಚ್ಚಿನ ಕುಸುಮವ ಸುರಿದರು 5: ಶ್ರೀ ಮನೋಹರ ಗೋಪಾಲ ಮೂರುತಿ ಆ ಮಧುಕುಂಜ ವನದಿ ತ್ರಿಭಂಗಿಲಿ ಹೇಮಾಂಬರವುಟ್ಟು ಸುಗಂಧ ಕಸ್ತೂರಿ ನಾಮ ಮಕುಟದ ಬೆಳಗಿನಲಿ ಧಾಮ ವನಮಾಲೆ ಬಹಿರ್ಭೂಶಿತ ಸ್ವಾಮಿ ಪುರಂದರ ವಿಟ್ಠಲರಾಯನು ರಾಮಕ್ರಿಯ ಮೇಘರಂಜನಿ ಪಾಡೆ ಸಾಮವೇದ ನಮೋ ನಮೋ ಎನ್ನೆ
ದಾಸ ಸಾಹಿತ್ಯ ಪ್ರಕಾರ
ಬರೆದವರು
ಬಗೆ