ರಂಗಯ್ಯ ನಿನ್ನ ಯಾರೇನೆಂದರೊ

ರಂಗಯ್ಯ ನಿನ್ನ ಯಾರೇನೆಂದರೊ

(ರಾಗ ಸುರುಟಿ ಛಾಪುತಾಳ ) ರಂಗಯ್ಯ ನಿನ್ನ ಯಾರೇನೆಂದರೊ ||ಪ| ಸಕಲಭಾಗವತರು ಗತಿತಾಳಮೇಳದಿಂದ ತಕಕಿಟಕಿಟ ತಕಧಿಮಿಕೆಂದು ಕುಣಿವಾಗ ||ಅ|| ಸಕ್ಕರೆ ಚೀಣಿ ಹಾಲಿನ ಕೆನೆ ರಸದಿಂದ ಉಕ್ಕುವ ನೊರೆಹಾಲನು ಮೆದ್ದ ಕೃಷ್ಣಯ್ಯ || ದ್ರುಪದನ ಮಗಳ ಸೀರೆಯ ಸುತ್ತಿ ಸೆಳೆವಾಗ ಕೃಪೆಯಿಂದ ಅಕ್ಷಯವಿತ್ತ ದೇವನೆ ನಿನ್ನ || ಜಗದೊಡೆಯ ಮೂಲಗಿರಿಯ ಕೋನೇರಿ ತಿಮ್ಮ ಅಗಣಿತಮಹಿಮ ಶ್ರೀ ಪುರಂದರವಿಠಲ ನಿನ್ನ ||
ದಾಸ ಸಾಹಿತ್ಯ ಪ್ರಕಾರ
ಬರೆದವರು