ಯಾವ ಕರ್ಮವೋ

ಯಾವ ಕರ್ಮವೋ

( ರಾಗ ಗೌಳಿಪಂತು/ಸೌಳವಂತು. ಛಾಪು ತಾಳ) ಯಾವ ಕರ್ಮವೋ, ಇದು ಯಾವ ಪುಣ್ಯವೋ ||ಪ|| ಸತ್ತವನು ಎತ್ತ ಹೋದ ಸತ್ತು ತನ್ನ ಜನ್ಮಕ್ಹೋದ ಸತ್ತವನು ಉಂಬುವನೆಂದು ನಿತ್ಯ ಪಿಂಡ ಇಕ್ಕಿದರೆ || ಎಳ್ಳು ದರ್ಭೆ ಕೈಲಿ ಪಿಡಿದು ಪಿತೃತೃಪ್ತಿಯೆಂದು ಬಿಡಲು ಎಳ್ಳು ಮೀನು ನುಂಗಿತು ದರ್ಭೆ ನೀರೊಳು ಹರಿದುಹೋಯಿತು || ಎಡಕ್ಕೆ ಬಲಕ್ಕೆ ಎಂದು ಕೇಳಿ ಎಡಕ್ಕೆ ತೋರಿಸಿ ಬಲಕ್ಕೆ ತೋರಿಸಿ ಕಡು ದೇವತೆಯನ ಬರಿಸಿ ಕಠಿನವಸ್ತು ಕೇಳಿರುತಾರೆ || ಮಂತ್ರಾಕ್ಷತೆಯ ಕೈಲಿ ಕೊಟ್ಟು ಸ್ವರ್ಗವನ್ನು ಹೋಗೆಂದರೆ ಮಂತ್ರವೆಲ್ಲೊ ಅಕ್ಷತೆಯೆಲ್ಲೊ ಅವರೆಲ್ಲೊ ಇವರೆಲ್ಲೊ || ಹೇಳುವನು ಅಜ್ಞಾನಿ ಕೇಳುವನು ಅವಿವೇಕಿ ಹೇಳುವ ಕೇಳುವ ಇಬ್ಬರ ಸೊಲ್ಲ ಪುರಂದರವಿಠಲ ಬಲ್ಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು