ಯಾರ ಮಗನಮ್ಮ ರಂಗಯ್ಯ

ಯಾರ ಮಗನಮ್ಮ ರಂಗಯ್ಯ

( ರಾಗ ಜಂಜೂಟಿ ಛಾಪುತಾಳ) ಯಾರ ಮಗನಮ್ಮ ರಂಗಯ್ಯ ||ಪ|| ಯಾರ ಮಗನಮ್ಮ ದಾರಿಯ ಕಟ್ಟುವ ಯಾರಿಗು ಇವನ ದಾರಿಯು ತಿಳಿಯುದೆ || ಕಾಂತೆ ಕೇಳು ಏಕಾಂತದಿ ಮಲಗಿದ್ದೆ ಕಾಂತನೆಂತೆ ಏಕಾಂತಕೆ ಕರೆದನೆ || ಅರವಿಂದಾನನೆ ಕೇಳು ಅರೆಮೊರೆಯಿಲ್ಲದೆ ಅರೆಕಟ್ಟಿ ಎನ್ನ ಅಧರಮುದ್ದಿಕ್ಕಿದ || ಸರಸಿಜಾನನೆ ಕೇಳೇ ಸರಿರಾತ್ರಿವೇಳೆಯಲಿ ಹರುಷದಿಂದಲಿ ಎನ್ನ ಸರಸಕ್ಕೆ ಎಳೆದನೆ || ಗಾಡಿಗಾರ ಶ್ರೀಪುರಂದರವಿಠಲ ಗಾಢಾಲಿಂಗನ ಮಾಡಿ ಓಡಿಪೋದನಮ್ಮ ||
ದಾಸ ಸಾಹಿತ್ಯ ಪ್ರಕಾರ
ಬರೆದವರು