ಯಾರೆತ್ತ ಪೋದರೇನು ಊರೆತ್ತ ಬೆಂದರೇನು

ಯಾರೆತ್ತ ಪೋದರೇನು ಊರೆತ್ತ ಬೆಂದರೇನು

( ರಾಗ ಕಾಂಭೋಜ ಝಂಪೆತಾಳ) ಯಾರೆತ್ತ ಪೋದರೇನು ಊರೆತ್ತ ಬೆಂದರೇನು ಪೂರ್ವಪ್ರಾಪ್ತಿ ತನಗಲ್ಲದುಂಟೆ ಮನವೆ || ಹಗಲೆ ತಾರಕೆಗಳು ಹಾರಿ ಆಡಿದರೇನು ಬೈಗು ಭಾಸ್ಕರ ಮೂಡಿ ಬೆಳಗಾದರೇನು ಹಗೆಯವರ ಮನೆಯಲ್ಲಿ ಹಗರಣಾದರೆ ಏನು ನಿಗಮಗೋಚರನಂಘ್ರಿ ನೆನೆ ಕಂಡ್ಯ ಮನವೆ || ಬೆಂಡು ಮುಳುಗಿದರೇನು ಗುಂಡು ತೇಲಿದರೇನು ಭಂಡ ನಾಲಿಗೆ ಎರಡು ತುಂಡಾದರೇನು ಉಂಡ ಮನೆಗೆರಡೆಣಿಪ ಮುರಿದು ಬಿದ್ದರೆ ಏನು ಪುಂಡರೀಕಾಕ್ಷನ್ನ ನೆನೆ ಕಂಡ್ಯ ಮನವೆ || ವೆಚ್ಚಕಿಲ್ಲದ ಹಣವು ವ್ಯರ್ಥವಾದರೆ ಏನು ಮಚ್ಚರಿಸುವರೆಲ್ಲ ಮಡಿದರೇನು ಅಚ್ಯುತಾನಂತ ಶ್ರೀಪುರಂದರವಿಠಲನ ನಿಶ್ಚಲ ಭಕುತಿಯಿಂದ ನೆನೆ ಕಂಡ್ಯ ಮನವೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು