ಮುದ್ದು ತಾರೋ ,ರಂಗ

ಮುದ್ದು ತಾರೋ ,ರಂಗ

(ರಾಗ ಧನಶ್ರೀ. ಆದಿ ತಾಳ ) ಮುದ್ದು ತಾರೋ ,ರಂಗ, ಎದ್ದು ಬಾರೋ ||ಪ|| ಅಂದವಾದ ಕರ್ಪೂರದ ಕರಡಿಗೆಯ ಬಾಯೊಳೊಮ್ಮೆ ||ಅ|| ವಿಷವನುಣಿಸಲು ಬಂದ ಅಸುರೆ ಪೂತನಿಯ ಕೊಂದೆ ವಶವಲ್ಲವೊ ಮಗನೆ ನಿನ್ನ ವಿಷವನುಂಡ ಬಾಯೊಳೊಮ್ಮೆ || ಕಡೆವ ಸಮಯದಿ ಬಂದು ಕಡೆವ ಸತಿಯ ಕೈಯ ಪಿಡಿದು ಕಡೆದ ಬೆಣ್ಣೆ ಮೊಸರನೆಲ್ಲ ಒಡನೆ ಮೆದ್ದ ಬಾಯೊಳೊಮ್ಮೆ || ತೊರವೆಯ ನಾರಸಿಂಹ ವರದ ಪುರಂದರವಿಠಲ ಹರವಿಹಾಲನೆಲ್ಲ ಕುಡಿದ ನೊರೆ ಹಾಲಿನ ಬಾಯೊಳೊಮ್ಮೆ ||
ದಾಸ ಸಾಹಿತ್ಯ ಪ್ರಕಾರ
ಬರೆದವರು