ಮುತ್ತೈದಾಗಿರಬೇಕು ಮುದದಿಂದಲಿ

ಮುತ್ತೈದಾಗಿರಬೇಕು ಮುದದಿಂದಲಿ

( ರಾಗ ಕಾಂಭೋಜ ಝಂಪೆತಾಳ ) ಮುತ್ತೈದಾಗಿರಬೇಕು ಮುದದಿಂದಲಿ ಹತ್ತುನೂರು ನಾಮದೊಡೆಯ ಹರಿನಾಮ ಪತಿಯೆಂದು ||ಪ|| ಗುರುಮಧ್ವಶಾಸ್ತ್ರವನು ಓದುವುದೇ ಮಾಂಗಲ್ಯ ವೈರಾಗ್ಯವೆಂಬ ಒಪ್ಪುವ ಮೂಗುತಿ ತಾರತಮ್ಯ ಜ್ಞಾನ ತಾಯಿತ್ತು ಮುತ್ತು ಸರ ಕರುಣರಸವೆಂಬ ಕಟ್ಟಾಣಿ ಕಟ್ಟಿಕೊಂಡು || ಹರಿಕಥೆ ಕೇಳುವುದು ಕಿವಿಗೆ ಮುತ್ತಿನ ಓಲೆ ನಿರತ ಸತ್ಕರ್ಮವು ನಿಜಕಾಂತಿಯು ಹರಿದಾಸರ ಪಾದರಜ ಹೆರಳು ಭಂಗಾರ ಗುರುಭಕುತಿ ಎಂಬಂಥ ಗಂಧಕುಂಕುಮ ಧರಿಸಿ || ಪೊಡವಿಯೊಳು ಪರಹಿತದ ಪಟ್ಟಾವಳಿಯುಟ್ಟು ಕೊಡುವ ದಾನಗಳೆಂಬೋ ಕುಬಸ ತೊಟ್ಟು ಬಿದದೆ ಎನ್ನೊಡೆಯ ಶ್ರೀಪುರಂದರವಿಠಲನ ದೃಢಭಕ್ತಿಯೆಂಬಂಥ ಕಡಗ ಬಳೆ ಇಟ್ಟುಕೊಂಡು ||
ದಾಸ ಸಾಹಿತ್ಯ ಪ್ರಕಾರ
ಬರೆದವರು