ಮುತ್ತು ಕೊಳ್ಳಿರೋ

ಮುತ್ತು ಕೊಳ್ಳಿರೋ

(ರಾಗ ಪಂತುವರಾಳಿ ಆದಿತಾಳ ) ಮುತ್ತು ಕೊಳ್ಳಿರೋ , ಜನರು ಮುತ್ತು ಕೊಳ್ಳಿರೋ ||ಪ|| ಮುತ್ತು ಬಂದಿದೆ ಕೊಳ್ಳಿ ಸಚ್ಚಿದಾನಂದ ದಿವ್ಯ ||ಅ. ಪ|| ಜ್ಞಾನವೆಂಬೋ ದಾರದಲ್ಲಿ ಪೋಣಿಸಿದ ದಿವ್ಯ ಮುತ್ತು ಧ್ಯಾನದಿಂದ ಕೊಂಬುದಿದನು ದೀನರಾದ ಭಕ್ತಜನರು || ಕಟ್ಟಲಾಗದು ಮೂಗಿನಲ್ಲಿ ಇಟ್ಟು ಮೆರೆಯಲಾಗದಿದು ಭ್ರಷ್ಟಜನಕೆ ಕಾಣಿಸದಂಥ ಕೃಷ್ಣನೆಂಬೋ ಆಣಿಮುತ್ತು || ಹಿಡಿಯಲಿಕ್ಕೆ ಸಿಲುಕದದು ಕಡೆ ಕಾಣದೆಂದು ಬೆಲೆಯು ಪೊಡವಿಗೆಲ್ಲ ಪುರಂದರವಿಠಲ ಒಡೆಯನೆಂಬೋ ದಿವ್ಯ ಮುತ್ತು ||
ದಾಸ ಸಾಹಿತ್ಯ ಪ್ರಕಾರ
ಬರೆದವರು