ಮುಟ್ಟ ಬಾರೋ ಎನ್ನನು

ಮುಟ್ಟ ಬಾರೋ ಎನ್ನನು

(ರಾಗ ಕಾನಡಾ ಆಟ(ಆದಿ) ತಾಳ ) ಮುಟ್ಟ ಬಾರೋ ಎನ್ನನು, ಹೇ ಮುದ್ದು ರಂಗ ||ಪ|| ಮುಟ್ಟ ಬಾರೋ ಎನ್ನ, ಪುಟ್ಟ ಪಾದವನೊತ್ತಿ ಮೆಟ್ಟಿ ಇಲ್ಲಿಗೆ ಈಗ ಮೆಲ್ಲ ಮೆಲ್ಲನೆ ಬಾರೋ ||ಅ|| ಅಪ್ಪಚ್ಚಿ ತರುವೆನಯ್ಯ ಬೇಕಾದಷ್ಟು ಅಪ್ಪವು ಹಾಲು ಮತ್ತು ಬೆಣ್ಣೆಯ ಕೊಡುವೆನೊ ಚಪ್ಪಾಳೆನಿಕ್ಕುತ ಮುಂದುಮುಂದಕೆ ಬಾರೋ || ಅರವಿಂದದಳನಯನ ಆನಂದರೂಪ ದುರುಳ ದೈತ್ಯನ ಗೆಲಿದ ಮುಚುಕುಂದವರದನೆ ಬಾರದೇನೋ ನಿನಗೆ ನಡೆವುದಕೆ ಈಗ || ನಡೆದು ನಡೆದು ನೊಂದೆನೊ ಕೇಳಯ್ಯ ಭವ ಅಡವಿಯ ಘಾಟ ಒಲ್ಲೆ , ಮೃಡಸಖ ಬೇಡುವೆ ಕಡೆಗಾಣಿಸೊ ತಂದೆ ಪುರಂದರವಿಠಲಯ್ಯ ||
ದಾಸ ಸಾಹಿತ್ಯ ಪ್ರಕಾರ
ಬರೆದವರು