ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ

ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ

(ರಾಗ ಮೇಚಗೌಳ ಧ್ರುವ ತಾಳ ) ಮುಟ್ಟಿ ಮುಟ್ಟಿ ಮುಟ್ಟಿ ಮುದ್ದು ವಿಟ್ಠಲ ನಿಷ್ಠೆಯಿಂದ ನೈವೇದ್ಯ ಇಡುವ ತನಕ ||ಪ|| ಪಂಚರಾತ್ರಾಗಮ ಪೂಜೆಗಳಿಂದ ಕಿಂಚಿತು ಭಕುತಿಯಿಂದಲೆ ಮಾಡಲು ಚಂಚಲಮನವ ಮಾಡಗೊಡಲು ಬೇಡ ಪಂಚಪಾಂಡವಪ್ರಿಯ ವಿರಿಂಚಾಧೀಶನೆ || ಸಣ್ಣಕ್ಕಿ ಅನ್ನ ಪರಮಾನ್ನಗಳಿಂದ ಬೆಣ್ಣೆ ಕಾಸಿದ ತುಪ್ಪ ಫುಲ್ಲಗಳಿಂದ ಎಣ್ಣೋರಿಗೆ ಮಂಡಿಗೆ ಭಕ್ಷ್ಯಗಳಿಂದ ಬಣ್ಣಿಸಿ ನೈವೇದ್ಯ ಇಡುವ ತನಕ || ಷೋಡಶೋಪಚಾರಪೂಜೆಗಳಿಂದ ಕಡು ಮುದ್ದು ಸುರಿವುತ್ತರಾಡುತಿರು ಬೇಡಿಕೊಂಬೆನು ಬಹಳ ಭಕುತಿಯಿಂದ ಪೊಡವಿಯನಾಳುವ ಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು