ಮುಟ್ಟಬೇಡವೋ ಎನ್ನನು ಕೃಷ್ಣಯ್ಯ
(ರಾಗ ಝಂಜೂಟಿ. ಛಾಪು ತಾಳ )
ಮುಟ್ಟಬೇಡವೋ ಎನ್ನನು ಕೃಷ್ಣಯ್ಯ ನೀ ||ಪ||
ದುಡುಕು ಮಾಡಲು ಬೇಡವೋ ದೂರ ನಿಲ್ಲೋ ||ಅ||
ದೊರೆತನದ ಬಾಳು ಮತ್ತು ಕೇಳಯ್ಯ ಕೃಷ್ಣ
ಹಿರಿತನದ ಪೆರ್ಮೆಯುಳ್ಳ
ದೊರೆಮಗನಾದರೇನು ಸಲ್ಲದೊ ಈ ಕಾರ್ಯ
ಸೆರಾ ಬಿಡಲೊ ರಂಗ ಚರಣಕ್ಕೆ ಎರಗುವೆ ||
ಮೊಸರು ಹೆಡಿಗೆ ಶಿರದಲಿ ದೇವಕಾರ್ಯ
ಮೀಸಲು ಪಾಲ್ಬೆಣ್ಣೆಯೊ ಕುಸುಮನಾಭನೆ
ನಿನ್ನ ಮನೆತನಕೆ ಆಗದೊ
ವಸುಧೆಯೊಳು ನಿನ್ನ ದಂಡಿಪರಿಲ್ಲವೆ ||
ಪೆತ್ತವರಿಲ್ಲವೇನೊ ನಿನಗೆ
ಮತ್ತು ಹಿತವನೊರೆವವರಿಲ್ಲವೆ
ಮುತ್ತಿನ ಗಿಡ ತೋರ್ದ ಎನ್ನ ಮುದ್ದು ಕೃಷ್ಣಯ್ಯ
ಹೊತ್ತಾಯಿತೊ ಬಿಡೊ ತಂದೆ ಪುರಂದರ ವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments