ಮಾರುತಿ ಮಜ್ಜನಕ ಮಾರುತಿ

ಮಾರುತಿ ಮಜ್ಜನಕ ಮಾರುತಿ

( ರಾಗ ಶಂಕರಾಭರಣ (ಭೈರವಿ) ಅಟತಾಳ) ಮಾರುತಿ ಮಜ್ಜನಕ ಮಾರುತಿ ||ಪ|| ಮಾರುತಿ ಕರುಣಿಸು ಜ್ಞಾನ ಎನ್ನ ಸೇರಿದ ಸತತ ಅಜ್ಞಾನ ಆಹ ದೂರ ಓಡಿಸಿ ಹರಿಆರಾಧನೆಯಿತ್ತು ತೋರಿಸು ಪಥ ಸರ್ವಾಧಾರ ಉದ್ಧಾರನೆ ||ಅ.ಪ|| ದ್ವಿತೀಯ ಯುಗದೊಳವತರಿಸಿ ಸೀತಾ- ಪತಿಯ ಪಾದಕೆ ನಮಸ್ಕರಿಸಿ ರವಿ- ಸುತಗೆ ಒಲಿದು ಉದ್ಧರಿಸಿ ಆಬ್ಧಿ ಅತಿವೇಗದಿಂದ ಉತ್ತರಿಸಿ ಆಹಾ ಕ್ಷಿತಿಜದೇವಿಯನು ತುತಿಸಿ ಮುದ್ರಿಕೆಯಿತ್ತು ದಿತಿಜರ ಸದೆದ ಭಾರತಿಯ ರಮಣನೆ ||೧|| ಕುರುಕುಲದೊಳಗೆ ಉದ್ಭವಿಸಿ ಬಲು ಗರಳ ಪದಾರ್ಥವ ಸಲಿಸಿ ಚೆಲ್ವ ತರುಣಿ ರೂಪವನೆ ಶೃಂಗರಿಸಿ ನಿಶಾ- ಚರ ಕೀಚಕನ ಸಂಹರಿಸಿ ಆಹಾ ಜರೆಯ ಸುತನ ಸೀಳಿ ಧರಣಿಪಾಲಕರನ್ನು ಸೆರೆಯ ಬಿಡಿಸಿ ಕಾಯ್ದ ಪರಮಸಮರ್ಥನೆ ||೨|| ಭೂತಲದೊಳಗೆ ಯತಿಯ ಚೆಲುವ ರೂಪ ತೋರಿದ ಶುಭಕಾಯ ಮಾಯಾ- ಮತವನಳಿದ ಮುನಿರಾಯ ಕಾಯಾ ಜಾತಜನಕಗತಿಪ್ರಿಯ ಆಹಾ ಭೂತನಾಥನೆ ಪರಮಾತ್ಮನೆಂಬಂಥ ಪಾತಕರರಿ ಜಗನ್ನಾಥವಿಠ್ಠಲದೂತ ||೩||
ದಾಸ ಸಾಹಿತ್ಯ ಪ್ರಕಾರ
ಬರೆದವರು