ಮಾಯೆ ಎನ್ನ

ಮಾಯೆ ಎನ್ನ

(ರಾಗ ಧನ್ಯಾಸಿ. ಅಟ ತಾಳ ) ಮಾಯೆ ಎನ್ನ ಕಾಯವನ್ನುಪಾಯದಿಂದ ನೋಯಿಸಿ ಬಾಯಿ ಮುಚ್ಚಿ ಕೊಲ್ಲುತಾಳೆ ಕಾಯೋ ಲಕ್ಷ್ಮಿಯರಸನೆ ಮಾತಾ ಪಿತರ ವಿಕಳದಿಂದ ಶ್ವೇತ ಬಿಂದು ಬೀಳಲು ರಕ್ತ ಕೀವು ತಾಕಿ ಮಾಂಸ ಚೀಲದೊಳಗೆ ಬೆಳೆದ ನಾ ರಕ್ತ ಸೂಸಿ ಬಸಿರೊಳೊಂಭತ್ತು ತಿಂಗಳಿದ್ದೆ ನಾ ಮತ್ತೆ ಭೂಮಿಯೊಳಗೆ ಜನಿಸಲಾರೆ ಲಕ್ಷ್ಮಿಯರಸನೆ ಎಲುಬುಗಳವ ಮಾಡಿ ನರದ ಬಳ್ಳಿಯಲ್ಲಿ ಬಿಗಿಯುತ ಒಳಗೆ ರಕ್ತ ಮಾಂಸದಿಂದ ಮಲವು ಮಜ್ಜ ಮೇದಾದಿ ಮಲಿನ ಚರ್ಮವನು ಹೊದಿಕೆಯೆಳೆದು ನಿತ್ಯ ಬೆಳೆವ ಈ ಹೊಲೆಯ ಗೂಡಿನೊಳಗೆ ಜನಿಸಲಾರೆ ಲಕ್ಷ್ಮಿಯರಸನೆ ಎನ್ನ ಸತಿಯು ಎನ್ನ ಸುತರು ಎನ್ನ ಬಂಧು ಬಳಗವು ಇನ್ನು ಸಾಕಿ ಸಲಹು ಎಂದು ಎನ್ನ ಹರಿದು ತಿಂಬರು ತನ್ನ ಸೆಳೆದೊಯ್ಯುವಾಗ ಬೆನ್ನಾಪರ ಕಾಣೆನೋ ಎನ್ನ ಸಲಹಬೇಕು ನೀನು ಚೆನ್ನ ಲಕ್ಷ್ಮಿಯರಸನೆ ಇರುವೆ ಮೊದಲು ಮಾಡಿ ಆನೆ ಕಡೆಯ ಮಾಡಿ ಬಸಿರಿನಲ್ಲಿ ಮರಳಿ ಮರಳಿ ಹುಟ್ಟಿ ಹೊಂದಿ ತೊಳಲಿ ಬಳಲಿ ಬಂದೆ ನಾ ಇರುಸು ಗಾಳಿಯೊಳಗೆ ಬಿದ್ದ ತರೆಗೆಲೆಯ ಅಂದವಾಯ್ತು ಮರಳಿ ಮರಳಿ ಹುಟ್ಟು ಹೊಂದಲಾರೆ ಲಕ್ಷ್ಮಿಯರಸನೆ ಲಕ್ಷ ಜೀವರಾಶಿ ನಿನ್ನ ಕುಕ್ಷಿಯೊಳಗಿಂಬಿಟ್ಟು ಅಚ್ಯುತಾ ಅನಂತ ನನ್ನನೇಕೆ ಹೊರಗು ಮಾಡಿದೆ ಮಚ್ಚರಿಸದೆನ್ನ ನೀನು ಕುಕ್ಷಿಯೊಳಗಿಂಬಿಟ್ಟು ರಕ್ಷಿಸಯ್ಯ ಲಕುಮಿಯರಸ ಪುರಂದರವಿಠಲಯ್ಯ
ದಾಸ ಸಾಹಿತ್ಯ ಪ್ರಕಾರ
ಬರೆದವರು