ಮರೆಯದಿರೆಲೆ ಮನವಿಲ್ಲಿ

ಮರೆಯದಿರೆಲೆ ಮನವಿಲ್ಲಿ

(ರಾಗ ಪೂರ್ವಿ ಅಟತಾಳ ) ಮರೆಯದಿರೆಲೆ ಮನವಿಲ್ಲಿ, ಯಮ ಪುರಿಗೆ ಒಯ್ದು ಬಾಧಿಸುತ್ತಿಹರಲ್ಲಿ ||ಪ|| ಪರ ನಾರಿಯರ ಸಂಗವಿಲ್ಲಿ, ಉಕ್ಕು ಎರದ ಸತಿಯರ ತಕ್ಕೈಸುವರಲ್ಲಿ ಗುರು ಹರಿಯರ ನಿಂದೆಯಿಲ್ಲಿ, ಬಾಯೋ- ಳರೆದು ಸೀಸವ ಕಾಸಿ ಹೊಯಿಸುವರಲ್ಲಿ || ಉಂಡ ಮನೆಯ ಕೊಂಬುದಿಲ್ಲಿ, ಎದೆ ಗುಂಡಿಗೆಯನು ಸೀಳಿ ಕೊಲುತಿಹರಲ್ಲಿ ಗಂಡನ ದಣಿಸುವುದಿಲ್ಲಿ, ಯಮ ಕುಂಡದೊಳಗೆ ಹಾಕಿ ಕುದಿಸುವರಲ್ಲಿ || ಚಾಡಿಗಳ್ಹೇಳುವುದಿಲ್ಲಿ, ನುಡಿ- ದಾಡುವ ನಾಲಿಗೆ ಕೀಳುವರಲ್ಲಿ ಬೇಡಿದರಿಗೆ ಧರ್ಮಕ್ಕಿಲ್ಲಿ ,ಇದ್ದು ನೀಡದಿರಲು ನರಕಕೆ ನೂಕ್ವರಲ್ಲಿ || ಪುಸಿ ಠಕ್ಕು ಠವಳಿಗಳಿಲ್ಲಿ, ಕಟ್ಟಿ ಎಸೆದು ಕೊಲ್ಲುವರೊ ನಿನ್ನವರು ಕೇಳಲ್ಲಿ ಅಶತ ಪ್ರಭೇದಗಳಿಲ್ಲಿ ಮಾಡೆ, ಬಿಸಿಯ ಕೆಂಡವ ತಂದು ತಿನಿಸುವರಲ್ಲಿ || ಸಿರಿಮದದೊಳಗಿಹುದಿಲ್ಲಿ, ಸೊಕ್ಕು ಮುರಿದು ನಿನ್ನ ಹಲ್ಲ ಕಳಚುವರಲ್ಲಿ ಪುರಂದರವಿಠಲನ ಇಲ್ಲಿ, ಬೆರೆಯೆ ಸ್ಥಿರವಾದ ಮುಕ್ತಿ ಪಡಕೊಂಬುವರಲ್ಲಿ ||
ದಾಸ ಸಾಹಿತ್ಯ ಪ್ರಕಾರ
ಬರೆದವರು