Skip to main content

ಮಧ್ವರಾಯ ಗುರು

(ರಾಗ ಸಾವೇರಿ. ಆಟ ತಾಳ)

ಮಧ್ವರಾಯ ಗುರು ಮಧ್ವರಾಯ
ಗುರು ಮಧ್ವರಾಯ ಗುರು ಮಧ್ವರಾಯ ||ಪ||

ರಾಮಾವತಾರದೊಳೊಮ್ಮೆ ಮಧ್ವರಾಯ
ನೀ ಮಹಾ ಹನುಮನಾದ್ಯೋ ಮಧ್ವರಾಯ
ಕಾಮಿತಾರ್ಥ ಸುರರಿಗಿತ್ತ್ಯೋ ಮಧ್ವರಾಯ , ಅಯ್ಯ
ಮುಷ್ಟಿಯಿಂದ ರಾವಣನ ಗೆದ್ಯೋ ಮಧ್ವರಾಯ ||

ಕೃಷ್ಣಾವತಾರದೊಳೊಮ್ಮೆ ಮಧ್ವರಾಯ
ದಿಟ್ಟ ಕಲಿ ಭೀಮನಾದ್ಯೋ ಮಧ್ವರಾಯ
ಕುಟ್ಟಿದ್ಯೋ ಕೌರವರನ್ನೆಲ್ಲ ಮಧ್ವರಾಯ , ಅಯ್ಯ ಶ್ರೀ-
ಕೃಷ್ಣನ ಹಿತವ ಪಡೆದ್ಯೋ ಮಧ್ವರಾಯ ||

ಧರಣಿಯೊಳು ನರನಾಗಿ ಜನಿಸಿದ್ಯೋ ಮಧ್ವರಾಯ
ದುರುಳ ಮಾಯಮತವ ತರಿದ್ಯೋ ಮಧ್ವರಾಯ
ಗುರು ವ್ಯಾಸರ ಹಿತವ ಪಡೆದ್ಯೊ ಮಧ್ವರಾಯ
ಪುರಂದರ ವಿಠಲನ ದಾಸನಾದ್ಯೋ ಮಧ್ವರಾಯ ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: