ಮತದೊಳಗೆ ಒಳ್ಳೆ ಮತ ಮಧ್ವಮತವು,
(ರಾಗ ರೇಗುಪ್ತಿ ಝಂಪೆ ತಾಳ )
ಮತದೊಳಗೆ ಒಳ್ಳೆ ಮತ ಮಧ್ವಮತವು, ರಘು-
ಪತಿ ಪೂಜಾ ವಿಧಾನಕ್ಕೆ ಪಾವನ ಮತವು
ಇದು ಪಾವನ ಮತವು ||ಪ ||
ನಾರಾಯಣನ ನಾಮಸ್ಮರಣೆ ನಂಬಿದಾ ಮತವು , ಇದು ನಂಬಿದಾ ಮತವು
ಪಾರಾಯಣಕೆ ಅನುಕೂಲ ಮತವು
ತಾರತಮ್ಯದಿ ಉದ್ಧರಿಸಿ ಶ್ರುತಿಗಳನೊರೆದ
ಧಾರಿಣಿಯ ಸುರರ ಸಂತೋಷದ ಮತವು ||
ಅಕಳಂಕ ಶ್ರೀಹರಿಗೆ ವಜ್ರಾಂಕಿತ ಮತವು, ಇದು ಮುದ್ರಾಂಕಿತ ಮತವು
ಸಕಲ ದೇಶಕ್ಕೆ ಸನ್ಮತವಾದ ಮತವು
ಅಕುಟಿಲ ಶುಕಸನಕಾದಿ ಮುನೀಂದ್ರರ
ನಿಖಿಳ ಕ್ರಿಯಪದವೀವ ನಿರ್ಮಲ ಮತವು ||
ಸರಸ ಸದ್ಗುಣ ಸತ್ಯ ಸಾತ್ವಿಕವೀ ಮತವು, ಇದು ಶುದ್ಧ ಸಾತ್ವಿಕ ಮತವು
ಗುರು ಶಿಷ್ಯರಿಗೆ ಅನುಕೂಲವಾದ ಮತವು
ಪರಮತ ಖಂಡಿಸಿ ಪಂಡಿತರು ಪೇಳಿದ
ಪುರಂದರವಿಠಲನ ಮತವೆ ಹನುಮನ ಮತವು ||
ದಾಸ ಸಾಹಿತ್ಯ ಪ್ರಕಾರ
ಬರೆದವರು
- Log in to post comments