ಮಂದಮತಿಯೋ ನಾನು ಮದನಜನಕನು ನೀನು

ಮಂದಮತಿಯೋ ನಾನು ಮದನಜನಕನು ನೀನು

(ರಾಗ ಕಾಂಭೋಜ ಝಂಪೆ ತಾಳ ) ಮಂದಮತಿಯೋ ನಾನು ಮದನಜನಕನು ನೀನು ಕುಂದುಗಳನೆಣಿಸದೆ ದಯಮಾಡಿ ಸಲಹೊ ||ಪ|| ಪಾಪಕರ್ತನು ನಾನು ಪಾಪನಾಶನು ನೀನು ಕೋಪ ಮದ ಮತ್ಸರದಿ ಸುಳಿವೆ ನಾನು ತಾಪವನು ತರಿದು ನಿರ್ಭಯವ ಮಾಡುವೆ ನೀನು ರೂಪ ಛಾಯಕೆ ಮರುಳುಗೊಂಬೆನೋ ನಾನು || ಶರಣರಕ್ಷಕ ನೀನು ಪರಮಪಾತಕಿ ನಾನು ದುರಿತಪರ್ವತವ ಪರಿಹರಿಪೆ ನೀನು ಮರುಳುಗೊಂಬೆನು ನಾನು ಅರಿತು ರಕ್ಷಿಪೆ ನೀನು ಗರುವಾಹಂಕಾರಿ ನಾನು ಅಗಮ್ಯ ನೀನು || ಮಂದಭಾಗ್ಯನು ನಾನು ಇಂದಿರಾಪತಿ ನೀನು ಹಿಂದುಮುಂದಿನ ಸುದ್ದಿ ಅರಿಯದವ ನಾನು ತಂದೆ ಶ್ರೀಪುರಂದರವಿಟ್ಠಲರಾಯನೆ ಎಂದೆಂದು ಭಕ್ತರನು ಸಲಹುವೆಯೊ ನೀನು ||
ದಾಸ ಸಾಹಿತ್ಯ ಪ್ರಕಾರ
ಬರೆದವರು