Skip to main content

ಮಂಗಳ ಗುರು ರಾಘವೇಂದ್ರಗೆ ಜಯ

( ರಾಗ - ನಾದನಾಮಕ್ರಿಯೆ ( ಭೈರವಿ) ಅಟತಾಳ(ಕಹರವಾ) )

ಮಂಗಳ ಗುರು ರಾಘವೇಂದ್ರಗೆ ಜಯ ||ಪ||
ಮಂಗಳ ಸುಜನಾಂಬುಧಿಚಂದ್ರಗೆ ||ಅ.ಪ||

ಶ್ರೀಸುಧೀಂದ್ರಕುಮಾರಗೆ ಮಂಗಳ
ಭೂಸುರನುತ ಮಹಿಮಗೆ ಮಂಗಳ
ದೇಶಿಕ ಕುಲವನಜಾರ್ಕಗೆ ಮಂಗಳ
ಭಾಸುರ ಕೀರ್ತಿಯ ಪಡೆದವಗೆ ||೧||

ವೃಂದಾವನಭುವಿಯೊಳಗೆ ಸುರದ್ರುಮ-
ದಂದದಿ ರಾಜಿಸುವಗೆ ಮಂಗಳ
ಅಂಧ ಪಂಗು ಮೂಕ ಬಧಿರರ ಈಪ್ಸಿತ
ಸಂದೋಹ ಸಲಿಸುವ ಮುನಿವರಗೆ ||೨||

ಭೂತಪ್ರೇತಬೇತಾಳ ಭಯವಿಪಿನ
ವೀತಿಹೋತ್ರನೆನಿಪಗೆ ಮಂಗಳ
ವಾತಜನುತ ಜಗನ್ನಾಥವಿಠಲನ
ದೂತರ ಸಲಹುವ ದಾತನಿಗೆ||೩||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: