ಭಕುತರ ಸೇವೆಯ ಕೊಡು ಕಂಡ್ಯ

ಭಕುತರ ಸೇವೆಯ ಕೊಡು ಕಂಡ್ಯ

( ರಾಗ ಪೂರ್ವಿ. ಅಟ ತಾಳ) ಭಕುತರ ಸೇವೆಯ ಕೊಡು ಕಂಡ್ಯ, ನಿನ್ನ ಭಕುತರ ಸಂಗವ ಕೊಡು ಕಂಡ್ಯ ಹರಿಯೆ ||ಪ|| ಶ್ರೀ ತುಲಸೀ ಪದುಮಾಕ್ಷದ ಸರವಿಟ್ಟು ಪ್ರೀತಿಯಿಂದ ಏಕಾದಶಿಯ ಮಾಡಿ ಚಾತುರ್ಜಾವದ ಹೊತ್ತು ಜಾಗರಗಳ ಮಾಡಿ ಪೂತರೊಳಾಡುತಲಿಪ್ಪ ಶ್ರೀ ಹರಿಯ || ಶಂಖಚಕ್ರಂಗಳನೊತ್ತಿಕೊಂಡು ಶಂಖಚಕ್ರಧರನೆಂಜಲನುಂಡು ಕಿಂಕರತರ ದೇಹ ಪರವಶಮಾಗಲ್ ಝೇಂಕಿಸುತ ಜರೆದಾಡುತ ನಲಿವ || ದ್ವಾದಶ ನಾಮಗಳನುಚ್ಚರಿಸುತ ದ್ವಾದಶ ನಾಮಂಗಳಿಟ್ಟುಕೊಂಡು ದ್ವಾದಶಿ ಸಾಧಿಸಿ ಪಾರಣೆಗಳ ಮಾಡಿ ದ್ವಾದಶ ಮೂರ್ತಿಯ ಮನದಲ್ಲಿ ನೆನೆವ ಹರಿಗೆ ಸಿರಿ ರಾಣೀವಾಸಿಯೆಂದೆಂಬ ಶ್ರೀ- ಹರಿಗೆ ಬೊಮ್ಮ ಕುಮಾರನೆಂದೆಂಬ ಹರಿಗೆ ಹರನು ಮೊಮ್ಮಗನೆಂದೆಂಬ ಶ್ರೀ- ಹರಿಗೆ ಸುರರಾಳುಗಳೆಂದೆಂಬ ಆಪತ್ತು ಬಂದರೆ ಸಂಪತ್ತು ಬಂದರೆ ಲೇಪಿಸಿಕೊಂಡಿರದೆ ನಮ್ಮ ಶ್ರೀಪುರಂದರವಿಠಲಚರಣವೆಂಬ ಆ ಪಾದಪದುಮವ ಮನದಲ್ಲಿ ನೆನೆವರ
ದಾಸ ಸಾಹಿತ್ಯ ಪ್ರಕಾರ
ಬರೆದವರು