ಬೈಲಿಗೆ ಬೈಲಾಗಿತು

ಬೈಲಿಗೆ ಬೈಲಾಗಿತು

( ರಾಗ ಬೆಹಾಗ್. ಆದಿ ತಾಳ) ಬೈಲಿಗೆ ಬೈಲಾಗಿತು ಬೈಲೊಳಗೆ ||ಪ|| ಸೂತ್ರ ಬೊಂಬೆಯು ಮಾಡಿ ಹರಿ ಸೂತ್ರದಿಂ ಕುಣಿಸಾಡಿ ಸೂತ್ರ ಕಡಿಯಿತು ಬೊಂಬೆ ಮುರಿಯಿತು ಆಟ ನಿಂತಿತು ಕೇಳೊ ಮನುಜ || ಚಂದಾಗಿ ಜ್ಯೋತಿಯು ಬೆಳಗಿ ಎಣ್ಣೆಯು ಬತ್ತಿಯು ಹಾಕಿ ಎಣ್ಣೆ ಮುಗಿಯಿತು ಬತ್ತಿ ಕಡಿಯಿತು ಕತ್ತಲು ಆಯಿತು ಕೇಳೊ ಮನುಜ || ನೆಂಟರಿಷ್ಟರು ಕೂಡಿ ಅವರು ಸಂತೆಗೋಸ್ಕರವಾಗಿ ಸಂತೆ ಮುಗಿಯಿತು ಚಿಂತೆ ಹತ್ತಿತು ಭ್ರಾಂತಿ ಆಯಿತು ಕೇಳೊ ಮನುಜ || ಬಾಲೆಯೊಬ್ಬಳು ಕೂಡಿ ಅವಳು ನೀರಿಗೋಸ್ಕರ ಪೋಗಿ ನೀರು ತುಂಬಿತು ಕಾಲು ಜಾರಿತು ಕೊಡವು ಒಡೆಯಿತು ಕೇಳು ಮನುಜ || ಪರಿಪರಿ ವಿಧದಲಿ ನಾನು ಪರಮಾತ್ಮನ ಸ್ತುತಿಯ ಮಾಡಿ ಪರಮಮೂರುತಿ ಪುರಂದರವಿಠಲನೆ ಕರುಣಿಸೊ ಪಾಲಿಸೊ ಪರಮದಯಾಳೊ ||
ದಾಸ ಸಾಹಿತ್ಯ ಪ್ರಕಾರ
ಬರೆದವರು