ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ

ಬೆನಕನನೊಲ್ಲೆನವ್ವ , ತುಲಕಿ ಆಡುವನ ಷಣ್ಮುಖನನೊಲ್ಲೆನವ್ವ, ಬಹುಬಾಯಿಯವನ ಇಂದ್ರನನೊಲ್ಲೆನವ್ವ , ಮೈಯೆಲ್ಲ ಕಣ್ಣನವ್ವ ಚಂದ್ರನನೊಲ್ಲೆನವ್ವ , ಕಳೆಗುಂದುವವನ ರವಿಯನೊಲ್ಲೆನವ್ವ , ಉರಿದು ಮೂಡುವನ ಹರನನೊಲ್ಲೆನವ್ವ , ಮರುಳುಗೊಂಬುವನ ಚೆನ್ನರಾಯ ಚೆಲುವ ಜಗಕೆಲ್ಲ ಒಡೆಯನ ಕರೆದು ತಾರೆ ಎನಗೆ ಪುರಂದರವಿಠಲ||
ದಾಸ ಸಾಹಿತ್ಯ ಪ್ರಕಾರ
ಬರೆದವರು