ಬುತ್ತಿಯ ಕಟ್ಟೋ

ಬುತ್ತಿಯ ಕಟ್ಟೋ

( ರಾಗ ರೇಗುಪ್ತಿ ಆದಿತಾಳ) ಬುತ್ತಿಯ ಕಟ್ಟೋ, ಮನುಜ , ಬುತ್ತಿಯ ಕಟ್ಟೋ ಬುತ್ತಿಯನು ಕಟ್ಟಿದರೆ ಎತ್ತಲಾದರು ಉಣಬಹುದು ||ಪ|| ಧರ್ಮವೆಂಬ ಮಡಿಕೆಯಲ್ಲಿ ನಿರ್ಮಲಮನಗಂಗೆ ತುಂಬಿ ಸಮ್ಮನದುರಿಯ ಹಚ್ಚಿ ಒಮ್ಮಾನಕ್ಯನ್ನ ಬಾಗಿ || ಅರಿವು ಎಂಬ ಅರಿವೆ ಹಾಸಿ ಹರಿವಿಹಾಲ ಮೊಸರ ತಳಿದು ಪರಮವೈರಾಗ್ಯದಿಂದಲೆ ಶ್ರೀ- ಹರಿಗೆ ಅರ್ಪಿತವೆಂದು || ಕರ್ತು ಪುರಂದರವಿಠಲನ ತತ್ವವೆಂಬ ಬುತ್ತಿಯನ್ನು ಹತ್ತಿರ ತಂದಿಟ್ಟುಕೊಂಡು ನಿತ್ಯ ಉಂಡು ತೃಪ್ತಿಪಡಿರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು