ಬಾರಯ್ಯ ವೆಂಕಟರಮಣ

ಬಾರಯ್ಯ ವೆಂಕಟರಮಣ

( ರಾಗ ಸಾವೇರಿ. ತ್ರಿಪುಟ ತಾಳ) ಬಾರಯ್ಯ ವೆಂಕಟರಮಣ, ಭಕ್ತರ ನಿಧಿಯೆ ||ಪ|| ತೋರೋ ನಿನ್ನಯ ದಯ, ತೋಯಜಾಂಬಕನೆ ||ಅ|| ವೇದಗೋಚರ ಬಾರೋ, ಆದಿಕಚ್ಛಪ ಬಾರೋ ಮೋದಸೂಕರ ಬಾರೋ, ಸದಯಾ ನರಸಿಂಹ ಬಾರೋ || ವಾಮನ ಭಾರ್ಗವ ಬಾರೋ, ರಾಮಕೃಷ್ಣನೆ ಬಾರೋ ಪ್ರೇಮದ ಬುದ್ಧನೆ ಬಾರೋ, ಸ್ವಾಮಿ ಕಲ್ಕಿ ನೀ ಬಾರೋ || ಅರವಿಂದನಾಭ ಬಾರೋ, ಸುರರ ಪ್ರಭುವೇ ಬಾರೋ ಪುರುಹೂತವಂದ್ಯ ಬಾರೋ ಪುರಂದರ ವಿಠಲ ಬಾರೋ ||
ದಾಸ ಸಾಹಿತ್ಯ ಪ್ರಕಾರ
ಬರೆದವರು