Skip to main content

ಬಾರಯ್ಯ ರಂಗ ಬಾರಯ್ಯ ಕೃಷ್ಣ

( ರಾಗ ಶಂಕರಾಭರಣ. ಅಟ ತಾಳ)

ಬಾರಯ್ಯ ರಂಗ ಬಾರಯ್ಯ ಕೃಷ್ಣ
ಬಾರಯ್ಯ ಸ್ವಾಮಿ ಬಾರಯ್ಯ ||ಪ||
ವಾರಣಭಯವ ನಿವಾರಣ ಮಾಡಿದ
ಕಾರುಣ್ಯನಿಧಿಯೆನ್ನ ಹೃದಯ ಮಂದಿರಕೆ ||ಅ||

ಮೊದಲಿಂದ ಬರಬಾರದೆ ನಾನು ಬಂದೆ
ತುದಿ ಮೊದಲಿಲ್ಲದ್ಹೊಂದಿದೆ ಅಪನಿಂದೆ
ಇದು ಗೆದ್ದು ಕಳೆದುಪೋಪುದು ಹೇಗೆ ಮುಂದೆ
ಪದುಮನಾಭ ತಪ್ಪು ಕ್ಷಮಿಸಯ್ಯ ತಂದೆ ||

ಹೆಣ್ಣು ಹೊನ್ನು ಮಣ್ಣಿನಾಸೆಯೊಳಿದ್ದು
ಪುಣ್ಯ ಪಾಪಂಗಳ ನಾನರಿತಿದ್ದು
ಅನ್ಯಾಯವಾಯಿತು ಇದಕೇನು ಮದ್ದು
ನಿನ್ನ ಧ್ಯಾನವ ಕೊಡು ಹೃದಯದೊಳಿದ್ದು ||

ಇಂದೆನ್ನ ಪೂರ್ವ ಪಾಪಂಗಳ ಕಳೆದು
ಮುಂದೆನ್ನ ಜನ್ಮ ಸಫಲವನ್ನುಗೈದು
ತಂದೆ ಪುರಂದರವಿಠಲ ನೀನೊಲಿದು
ಎಂದೆಂದಿಗಾನಂದ ಸುಖವನ್ನು ಸುರಿದು ||

ದಾಸ ಸಾಹಿತ್ಯ ಪ್ರಕಾರ: 
ಬರೆದವರು: