ಬಾಣಂತಿ ಎನ್ನ ಬಾ ಅಂತಿ

ಬಾಣಂತಿ ಎನ್ನ ಬಾ ಅಂತಿ

(ರಾಗ ಕಾಂಭೋಜ ಛಾಪುತಾಳ) ಬಾಣಂತಿ ಎನ್ನ ಬಾ ಅಂತಿ ||ಪ|| ಬಾಣಂತಿಯೆಂಬೋ ಬಗೆಯ ನೀನರಿತು ಬಾರೆಂದು ಕರೆಯೋದುಚಿತವೆ ರಂಗ ||ಅ|| ಹಿಂಗದೆ ಮೊಲೆಹಾಲು ನೆರೆಮನೆಗ್ಹೋಗಿ ಭಂಗಪಡಲಾರೆ ಕಂದನಿಗಾಗಿ || ಖಾರಕಷಾಯಂಗಳು, ಕೇಳೆಲೊ ರಂಗ ಒಪ್ಪೊತ್ತಿನಹಾರವು ಯಾರು ಹೇಳಿದರು ನೀ ತಿರುಗಿ ಹೇಳುತಿದ್ದೆ ಊರ ನಾರಿಯರೆಲ್ಲ ನಗರೇನೊ ರಂಗ || ಗುಟ್ಟು ಗುಮ್ಮುತಲಿದೆಯೊ , ಕೇಳೆಲೊ ರಂಗ ಮೈಯೊಳು ಕಷ್ಟವಾಗುತಲಿದೆಯೊ ಎಷ್ಟು ಹೇಳಿದರು ಮತ್ತಷ್ಟು ಹೇಳುತಿದ್ದೆ ನಿಷ್ಠೂರವೇತಕೆ ಬೇಡ ರಂಗಯ್ಯ || ಒಡವೆ ವಸ್ತುಗಳೆಲ್ಲ , ಕೇಳೆಲೊ ರಂಗ ಚೆಂದದೊಳಿಡಬಾರದು ಮೈಮೇಲೆ ಬಡತನವಾಗಿರುವುದೆಲ್ಲವ ನೋಡಿ ದುಡುಕುಮಾಡಿ ಕೈ ಪಿಡಿವರೆ ರಂಗ || ಕಟ್ಟಿದ ಮಂಡೆ ಕಟ್ಟಿ , ಕೇಳೆಲೊ ರಂಗ ಪಣೆಯೊಳಿಟ್ಟ ಸಾದಿನ ಬೊಟ್ಟು ತೊಟ್ಟ ಕುಪ್ಪಸವೆಲ್ಲ ಗುಷ್ಟು ಎಣ್ಣೆಮಣಕು ಮುಟ್ಟಬೇಡ ಸಿರಿಪುರಂದರವಿಠಲ ||
ದಾಸ ಸಾಹಿತ್ಯ ಪ್ರಕಾರ
ಬರೆದವರು